ಕರ್ನಾಟಕ

karnataka

ETV Bharat / state

ಲೋಕಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನ : ಬಿಎಸ್​​​ವೈ - undefined

ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್‌  ಮೈತ್ರಿ ಸರಕಾರ ಕೋಮಾಕ್ಕೆ ಜಾರಿದೆ‌. ಹೀಗಾಗಿ ಲೋಕಾ ಚುನಾವಣೆ ಬಳಿಕ ಪತನವಾಗುವುದು ನಿಶ್ಚಿತ ಎಂದರು. ಕರ್ನಾಟಕದಲ್ಲಿ ಬಿಜೆಪಿ 22 ಸ್ಥಾನ ಹಾಗೂ ದೇಶದಲ್ಲಿ 300 ಸ್ಥಾನ ಗೆದ್ದು ಅಧಿಕಾರಕ್ಕೆ ಬರಲಿದೆ. ಮೋದಿ ಮತ್ತೆ ಪ್ರಧಾನಿಯಾಗೋದು ಖಚಿತ. ನೀರಾವರಿ ಯೋಜನೆಯಲ್ಲಿ ಕಾಂಗ್ರೆಸ್ ಹಾಗು ಈಗಿನ ಮೃತ್ರಿ ಸರಕಾರ 54 ಸಾವಿರ ಕೋಟಿ. ಖರ್ಚು ಮಾಡಿದ್ದೇವೆ ಎಂದು ಹೆಳಿದರು.

ಲೋಕಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನ

By

Published : Apr 16, 2019, 8:21 PM IST

ರಾಯಚೂರು : ಲೋಕಸಭಾ ಚುನಾವಣೆ ಬಳಿಕ ರಾಜ್ಯದಲ್ಲಿನ ಮೈತ್ರಿ ಸರಕಾರ ಪತನವಾಗುವುದು ನಿಶ್ಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಲೋಕಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನ

ಜಿಲ್ಲೆಯ ಸಿರವಾರ ಪಟ್ಟಣದಲ್ಲಿ ಅಯೊಜಿಸಿದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿದ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್‌ ಮೈತ್ರಿ ಸರಕಾರ ಕೋಮಾಕ್ಕೆ ಜಾರಿದೆ‌. ಹೀಗಾಗಿ ಲೋಕಾ ಚುನಾವಣೆ ಬಳಿಕ ಪತನವಾಗುವುದು ನಿಶ್ಚಿತ ಎಂದರು.

ಕರ್ನಾಟಕದಲ್ಲಿ ಬಿಜೆಪಿ 22 ಸ್ಥಾನ ಹಾಗೂ ದೇಶದಲ್ಲಿ 300 ಸ್ಥಾನ ಗೆದ್ದು ಅಧಿಕಾರಕ್ಕೆ ಬರಲಿದೆ. ಮೋದಿ ಮತ್ತೆ ಪ್ರಧಾನಿಯಾಗೋದು ಖಚಿತ. ನೀರಾವರಿ ಯೋಜನೆಯಲ್ಲಿ ಕಾಂಗ್ರೆಸ್ ಹಾಗು ಈಗಿನ ಮೃತ್ರಿ ಸರಕಾರ 54 ಸಾವಿರ ಕೋಟಿ. ಖರ್ಚು ಮಾಡಿದ್ದೇವೆ ಎಂದು ಹೆಳಿದರು.

ಆದರೆ ಈ ಹಣವನ್ನು ಲೂಟಿ ಮಾಡಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯ ಬಗ್ಗೆ ದೇಶದಲ್ಲಿ ಯಾರಿಗೂ ವಿಶ್ವಾಸವಿಲ್ಲ. ಕಾಂಗ್ರೆಸ್ ಪಕ್ಷದ ಸದ್ಯಸ್ಯರ ಸಂಖ್ಯೆ 46 ರಿಂದ 20 ಸ್ಥಾನಕ್ಕೆ ಇಳಿಯಲಿದೆ. ಕಾಂಗ್ರೆಸ್ ನ ಪ್ರಣಾಳಿಕೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಒಂದು ಕಾಲದಲ್ಲಿ ಅಪ್ಪ, ಮಕ್ಕಳ, ಸೊಸೆಯಂದಿರ ಆಡಳಿತ ಇತ್ತು. ಇದೀಗ ಮೊಮ್ಮಕ್ಕಳನ್ನೂ ರಾಜಕೀಯಕ್ಕೆ ಕರೆ ತಂದಿರುವ ಮಾಜಿ ಪ್ರಧಾನಿಗೆ ತುಮಕೂರಿನಲ್ಲಿ ಸೋಲಾಗಲಿದೆ. ಕಲಬುರಗಿಯಲ್ಲಿ ಖರ್ಗೆ ಸೋಲುತ್ತಾರೆ.

10 ವರ್ಷ ಆಡಳಿತ ನಡೆಸಿದ ಪ್ರಧಾನಿ ಮನಮೋಹನಸಿಂಗ್ ಅವರ ಹೆಸರು ಕಾಂಗ್ರೆಸ್ ನವರು ಪ್ರಚಾರಕ್ಕೆ ಬಳಸದಿದ್ದರೆ ಬಿಜೆಪಿ ಹೊಣೆಯೇ? ಎಂದು ಪ್ರಶ್ನಿಸಿದ್ರು. ಭಯೋತ್ಪಾದನೆ ಮುಕ್ತ, ಗುಡಿಸಲು ಮುಕ್ತ, ಮಾಡುವುದು ಬಿಜೆಪಿ ಕನಸು. ಸಿಎಂ ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿ ಕಮಿಷನ್ ಹೊಡೆದಿದ್ದಾರೆ. ರೈತರ ಸಾಲ ಮನ್ನಾ ಸಂಪೂರ್ಣ ಆಗಿಲ್ಲ ಎಂದರು.

ಸಮಾವೇಶದಲ್ಲಿ ಶಾಸಕರಾದ ಕೆ.ಶಿವನಗೌಡ ನಾಯಕ, ರಾಜುಗೌಡ, ಡಾ.ಶಿವರಾಜ್ ಪಾಟೀಲ್, ಜಿಲ್ಲಾಧ್ಯಕ್ಷ ಜೆ.ಶರಣಪ್ಪಗೌಡ, ಮಾಜಿ ಶಾಸಕರಾದ ಮಾನಪ್ಪ ವಜ್ಜಲ್, ತಿಪ್ಪರಾಜ್ ಹವಾಲ್ದಾರ್, ಮುಖಂಡರಾದ ಬಸವರಾಜ ಪಾಟೀಲ್ ಅನ್ವರಿ ಸೇರಿದಂತೆ ಇತರರಿದ್ದರು.

For All Latest Updates

TAGGED:

ABOUT THE AUTHOR

...view details