ಲಿಂಗಸುಗೂರು :ಹಟ್ಟಿ ಚಿನ್ನದ ಗಣಿ ಪೊಲೀಸ್ ಠಾಣೆಯ ಎರಡು ಪ್ರತ್ಯೇಕ ಕಳ್ಳತನ ಪ್ರಕರಣದಲ್ಲಿ ಆರೋಪಿತರಿಗೆ ಮೂರು ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಪ್ರತ್ಯೇಕ ಕಳ್ಳತನ ಪ್ರಕರಣ.. ಮೂವರು ಆರೋಪಿಗಳಿಗೆ 3 ವರ್ಷ ಕಠಿಣ ಕಾರಾಗೃಹ ಶಿಕ್ಷೆ.. - ಹಟ್ಟಿ ಚಿನ್ನದ ಗಣಿ ಪೊಲೀಸ್ ಠಾಣೆ
ವಿಚಾರಣೆ ನಡೆಸಿದ ಪ್ರಧಾನ ಸಿವಿಲ್ ನ್ಯಾಯಾಧೀಶ ಸಂದೀಪ ಪಾಟೀಲ ವಿಚಾರಣೆ ನಡೆಸಿ ಎರಡು ಪ್ರಕರಣಗಳಲ್ಲಿ ಪ್ರತ್ಯೇಕ ಶಿಕ್ಷೆ ಘೋಷಿಸಿದ್ದಾರೆ. ಸರ್ಕಾರ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ವಸಂತ ವಾದ ಮಂಡಿಸಿದ್ದರು..
ಆರೋಪಿಗಳಾದ ಶಿವರಾಜ ಭಾವಿಮನಿ, ಶಂಕರ್ ಕುಪ್ಪಿನಕೇರಿ ಕೂಡ್ಲಗಿ, ಹನುಮಂತ ಹೆರೂರ ದೇವದುರ್ಗ ಅವರಿಗೆ ಎರಡು ಪ್ರಕರಣಗಳಲ್ಲಿ ಮೂರು ವರ್ಷ ಕಠಿಣ ಶಿಕ್ಷೆ, ₹60 ಸಾವಿರ ದಂಡ ಹಾಗೂ ದೂರುರಾರರಿಗೆ ₹30 ಸಾವಿರ ಪರಿಹಾರ ನೀಡುವಂತೆ ಆದೇಶಿಸಲಾಗಿದೆ.
ಕ್ರಿಮಿನಲ್ ಕೇಸ್ 118/2020 ಹಟ್ಟಿ ಗ್ರಾಮದ ಶರಣಮ್ಮ ಹಾಗೂ ಕ್ರಿಮಿನಲ್ ಕೇಸ್ 119/2020 ಗುರುಗುಂಟಾ ಗ್ರಾಮದ ಹುಲಿಗೆಮ್ಮ ಅವರ ಮನೆ ಕಳ್ಳತನ ಪ್ರಕರಣಗಳ ತನಿಖೆ ನಡೆಸಿ ಸಿಪಿಐ ಯಶವಂತ ಬಿಸನಳ್ಳಿ ಪ್ರತ್ಯೇಕ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಪ್ರಧಾನ ಸಿವಿಲ್ ನ್ಯಾಯಾಧೀಶ ಸಂದೀಪ ಪಾಟೀಲ ವಿಚಾರಣೆ ನಡೆಸಿ ಎರಡು ಪ್ರಕರಣಗಳಲ್ಲಿ ಪ್ರತ್ಯೇಕ ಶಿಕ್ಷೆ ಘೋಷಿಸಿದ್ದಾರೆ. ಸರ್ಕಾರ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ವಸಂತ ವಾದ ಮಂಡಿಸಿದ್ದರು.