ಕರ್ನಾಟಕ

karnataka

ETV Bharat / state

17 ಜನ ಒಟ್ಟಾಗಿದ್ದೇವೆ, ಎಲ್ಲರಿಗೂ ಸಚಿವ ಸ್ಥಾನ ಕೊಡ್ಬೇಕು.. ಹೆಚ್.ವಿಶ್ವನಾಥ್‌ - ಮಾಜಿ ಸಚಿವ ಹೆಚ್.ವಿಶ್ವನಾಥ್

ಸಿಎಂ ಬಿ ಎಸ್‌ ಯಡಿಯೂರಪ್ಪ ಏನೇ ಹೇಳಿದರೂ ಸಚಿವ ಸ್ಥಾನ ಕೇಳೋದು ನಮ್ಮ ಕರ್ತವ್ಯ. ಎಲ್ಲರಿಗೂ ಸಚಿವ ಸ್ಥಾನ‌ ನೀಡಬೇಕು ಎಂದು ಮಾಜಿ ಸಚಿವ ಹೆಚ್.ವಿಶ್ವನಾಥ್ ಹೇಳಿದ್ದಾರೆ.

Former Minister H.Vishwanatha
ಹೆಚ್.ವಿಶ್ವನಾಥ್​

By

Published : Jan 13, 2020, 4:33 PM IST

ರಾಯಚೂರು:ಸಿಎಂ ಬಿ ಎಸ್ ಯಡಿಯೂರಪ್ಪ ಏನೇ ಹೇಳಿದರೂ ಸಚಿವ ಸ್ಥಾನ ಕೇಳೋದು ನಮ್ಮ ಕರ್ತವ್ಯ. ಎಲ್ಲರಿಗೂ ಸಚಿವ ಸ್ಥಾನ‌ ನೀಡಬೇಕು ಎಂದು ಮಾಜಿ ಸಚಿವ ಹೆಚ್.ವಿಶ್ವನಾಥ್​ ಹೇಳಿದ್ದಾರೆ.

ಮಾಜಿ ಸಚಿವ ಹೆಚ್.ವಿಶ್ವನಾಥ್​..

ಜಿಲ್ಲೆಯ ದೇವದುರ್ಗದ ತಿಂಥಿಣಿ ಬ್ರಿಡ್ಜ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 17 ಜನರಿಗೂ ಸಚಿವ ಸ್ಥಾನ‌ ನೀಡಬೇಕು ಎನ್ನುವುದು ನಮ್ಮ ಒತ್ತಾಯ. ಪಕ್ಷದಿಂದ ಯಾವ ತೀರ್ಮಾನ ಕೈಗೊಳ್ಳುತ್ತಾರೆ ಕಾದು ನೋಡುತ್ತೇವೆ. ಅಲ್ಲಿಯವರೆಗೆ ಏನೂ ಹೇಳಲು ಆಗುವುದಿಲ್ಲ ಎಂದರು.

ಬಿಎಸ್​ವೈ ಸಿಎಂ ಆಗಲು 17 ಜನ ತ್ಯಾಗ ಮಾಡಿದ್ದಾರೆ. ಹಾಗಾಗಿ ಎಲ್ಲರೂ ಒಟ್ಟಾಗಿ ಇದ್ದೇವೆ ಎಂದರು. ವಿಶೇಷ ಅಂದ್ರೆ ಇದೇ ಜಾಗದಲ್ಲಿ ಮೊದಲು ಪ್ರತಿಕ್ರಿಯೆ ನೀಡಿದ್ದ ಸಿಎಂ ಬಿಎಸ್‌ವೈ, ಮೊನ್ನೆ ಹೆಚ್‌. ವಿಶ್ವನಾಥ್ ಅವರು ನೀಡಿದ್ದ ಹೇಳಿಕೆ ಒಪ್ಪಿರಲಿಲ್ಲ. ಈ ಬಗ್ಗೆ ಹೈಕಮಾಂಡ್‌ ಜತೆಗೆ ಚರ್ಚಿಸ್ತೀನಿ. ಯಾರೋ ಹೇಳಿದಂತೆ ಕೇಳೋಕಾಗಲ್ಲ ಅಂತಾ ಹೇಳಿದ್ರು. ಈಗ ಹೆಚ್‌.ವಿಶ್ವನಾಥ್‌ ಈ ರೀತಿ ಹೇಳಿದ್ದಾರೆ. ಜತೆಗೆ ಮತ್ತೆ ಸಿಎಂ ಹೇಳಿಕೆಗೆ ಪ್ರತ್ರಿಕಿಯಿಸಲ್ಲ ಅಂದರು.

ABOUT THE AUTHOR

...view details