ರಾಯಚೂರು:ಕೇಂದ್ರ ಸರ್ಕಾರದ ನೂತನ ರಸ್ತೆ ಸುರಕ್ಷತಾ ನಿಯಮಗಳನ್ನು ಜಾರಿಗೊಳಿಸಿ ದಂಡದ ಪ್ರಮಾಣ ಹೆಚ್ಚಿಸಿದ ಬೆನ್ನಲ್ಲೆ ಮದ್ಯ ಸೇವಿಸಿ ವಾಹನ ಚಲಾಯಿಸಿದ ಚಾಲಕನಿಗೆ 10 ಸಾವಿರ ರೂಪಾಯಿ ದಂಡವನ್ನು ರಾಯಚೂರು ಜಿಲ್ಲೆಯ ಲಿಂಗಸುಗೂರಿನ ಜೆಎಂಎಫ್ ಸಿ ನ್ಯಾಯಲಯ ವಿಧಿಸಿದೆ.
ಮದ್ಯ ಸೇವಿಸಿ ವಾಹನ ಚಾಲನೆ ಮಾಡಿದ್ದಕ್ಕೆ ಬಿತ್ತು10 ಸಾವಿರ ದಂಡ - ಮದ್ಯ ಸೇವಿಸಿ ವಾಹನ ಚಲಾವಣೆ; 10 ಸಾವಿರ ದಂಡ
ಮದ್ಯ ಸೇವಿಸಿ ವಾಹನ ಚಲಾಯಿಸಿದ ಚಾಲಕನಿಗೆ ರಾಯಚೂರು ಜಿಲ್ಲೆಯ ಲಿಂಗಸುಗೂರಿನ ಜೆಎಂಎಫ್ ಸಿ ನ್ಯಾಯಲಯ , 10 ಸಾವಿರ ರೂಪಾಯಿ ದಂಡ ವಿಧಿಸಿದೆ.
![ಮದ್ಯ ಸೇವಿಸಿ ವಾಹನ ಚಾಲನೆ ಮಾಡಿದ್ದಕ್ಕೆ ಬಿತ್ತು10 ಸಾವಿರ ದಂಡ](https://etvbharatimages.akamaized.net/etvbharat/prod-images/768-512-4294552-thumbnail-3x2-.jpg)
ಸಾಂದರ್ಭಿಕ ಚಿತ್ರ
ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿ ಇತ್ತೀಚೆಗೆ ವಿಜಯ ಎಂಬುವವರು ಮದ್ಯ ಸೇವಿಸಿ ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ, ಈತನನ್ನು ತಡೆದ ಪೊಲೀಸರು ಕಾನೂನು ಕ್ರಮ ಉಲ್ಲಂಘನೆ ಮಾಡಿದ್ದಕ್ಕೆ ನೋಟಿಸ್ ನೀಡಿದ್ದರು.
ನಿನ್ನೆ ವಿಚಾರಣೆ ನಡೆಸಿದ ಜೆಎಂಎಫ್ಸಿ ನ್ಯಾಯಲಯದ ನ್ಯಾಯಾಧೀಶ ಸಂದೀಪ್ ಪಾಟೀಲ್, ಮದ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡಿದ ವಿಜಯನಿಗೆ 10 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ಈ ಸಂಬಂಧ ಹೊಸ ಕಾನೂನು ಜಾರಿಯಾದ ನಂತರ ಜಿಲ್ಲೆಯಲ್ಲಿ ಶೀಕ್ಷೆಗೆ ಒಳಗಾಗ ಮೊದಲ ವ್ಯಕ್ತಿ ಇವರಾಗಿದ್ದಾರೆ.
Last Updated : Aug 31, 2019, 2:57 AM IST