ರಾಯಚೂರು: ಹಾಸ್ಟೆಲ್ ನೌಕರರ ಬಾಕಿ ವೇತನ ಪಾವತಿಸುವಂತೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಎಐಯುಟಿಯುಸಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಹಾಸ್ಟೆಲ್ ನೌಕರರ ಬಾಕಿ ವೇತನ ನೀಡುವಂತೆ ಎಐಯುಟಿಯುಸಿ ಪ್ರತಿಭಟನೆ - ರಾಯಚೂರಿನಲ್ಲಿ ಎಐಯುಟಿಯುಸಿ ಪ್ರತಿಭಟನೆ
ರಾಯಚೂರಿನಲ್ಲಿ ಹಾಸ್ಟೆಲ್ ನೌಕರರ ಬಾಕಿ ವೇತನ ಬಿಡುಗಡೆಗೆ ಆಗ್ರಹಿಸಿ ಎಐಯುಟಿಯುಸಿ ವತಿಯಿಂದ ಪ್ರತಿಭಟನೆ ನಡೆಸಿದರು. ಸಮವಸ್ತ್ರ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.
ಹಾಸ್ಟೆಲ್ ನೌಕರರ ಪ್ರತಿಭಟನೆ
ಜಿಲ್ಲೆಯ ವಿವಿಧ ವಸತಿ ನಿಲಯಗಳಾದ ಬಿಎಸಿಎಂ, ಅಲ್ಪಸಂಖ್ಯಾತರ, ಮೊರಾರ್ಜಿ ದೇಸಾಯಿ ಸೇರಿದಂತೆ ಇತರೆ ಹಾಸ್ಟೆಲ್ಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ 5ರಿಂದ 6 ತಿಂಗಳಿನಿಂದ ಬಾಕಿ ವೇತನ ಪಾವತಿಲ್ಲ. ವೇತನಕ್ಕೆ ಅನುಗುಣವಾಗಿ ಇಎಸ್ಐ, ಪಿಎಫ್ ಸೌಲಭ್ಯ ನೀಡಬೇಕು. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಸಿಬ್ಬಂದಿಗಳನ್ನು ನೇಮಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.