ರಾಯಚೂರು: ಪ್ರತಿಭಟನಾ ನಿರತ ಜೆಎನ್ಯು ವಿದ್ಯಾರ್ಥಿಗಳ ಮೇಲೆ ಪೊಲೀಸರು ದೌರ್ಜನ್ಯ ಮುಂದುವರೆಸಿದ್ದನ್ನು ಖಂಡಿಸಿ ಇಂದು ಆಲ್ ಇಂಡಿಯಾ ಡೆಮೋಕ್ರಟಿಕ್ ಸ್ಟೂಡೆಂಟ್ ಆರ್ಗನೈಸೇಷನ್ ವತಿಯಿಂದ ನಗರದ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಜೆಎನ್ಯು ವಿದ್ಯಾರ್ಥಿಗಳ ಮೇಲೆ ಪೊಲೀಸರ ದೌರ್ಜನ್ಯಕ್ಕೆ ಖಂಡನೆ: ಎಐಡಿಎಸ್ಒ ಪ್ರತಿಭಟನೆ
ಪ್ರತಿಭಟನಾ ನಿರತ ಜೆಎನ್ಯು ವಿದ್ಯಾರ್ಥಿಗಳ ಮೇಲೆ ಪೊಲೀಸರು ದೌರ್ಜನ್ಯ ಮುಂದುವರೆಸಿದ್ದನ್ನು ಖಂಡಿಸಿ ಇಂದು ಆಲ್ ಇಂಡಿಯಾ ಡೆಮೋಕ್ರಟಿಕ್ ಸ್ಟೂಡೆಂಟ್ ಆರ್ಗನೈಸೇಷನ್ ವತಿಯಿಂದ ರಾಯಚೂರು ನಗರದ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಶುಲ್ಕ ಏರಿಕೆ ಖಂಡಿಸಿ ಪ್ರತಿಭಟನೆ ನಡೆಸುತಿದ್ದ ವಿದ್ಯಾರ್ಥಿಗಳು ಅದರ ಮುಂದುವರೆದ ಭಾಗವಾಗಿ ನಿನ್ನೆ ಪಾರ್ಲಿಮೆಂಟ್ವರೆಗೆ ಪ್ರತಿಭಟನಾ ರ್ಯಾಲಿ ಹಮ್ಮಿಕೊಂಡ ವಿದ್ಯಾರ್ಥಿಗಳ ಮೇಲೆ ಪೊಲೀಸರು ಮನಬಂದಂತೆ ಥಳಿಸಿದ್ದು, ಅರ್ಧ ದಾರಿಯಲ್ಲಿಯೇ ಬೀದಿ ದೀಪ ಆರಿಸಿ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆಸಿದ್ದು ತೀರ ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದರು.
ದೌರ್ಜನ್ಯದಿಂದ ಅನೇಕ ವಿದ್ಯಾರ್ಥಿಗಳು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಶಿಕ್ಷಣವನ್ನು ವ್ಯಾಪಾರೀಕರಣ ಗೊಳಿಸುವ ಉದ್ದೇಶದಿಂದ ದೇಶದ ಹಲವು ವಿಶ್ವವಿದ್ಯಾಲಯ, ಕಾಲೇಜುಗಳಲ್ಲಿ ಶುಲ್ಕ ಏರಿಕೆ ಮಾಡುತ್ತಿರುವುದು ಖಂಡನಾರ್ಹ. ಇದನ್ನು ವಿರೋಧಿಸಿ ಹೋರಾಟ ಮಾಡುತ್ತಿರುವ ವಿದ್ಯಾರ್ಥಿಗಳ ಮೇಲೆ ಪೊಲೀಸರ ಮೂಲಕ ದೌರ್ಜನ್ಯ ಎಸಗುತ್ತಿರುವ ಸರ್ಕಾರದ ಕ್ರಮ ಖಂಡನೀಯ. ಕೂಡಲೇ ಶುಲ್ಕ ಏರಿಕೆ ನಿಲ್ಲಿಸಬೇಕು. ಹಾಗೂ ನಿನ್ನೆ ದಾಳಿ ನಡೆಸಿದ ಪೊಲೀಸರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು