ರಾಯರ ಆರಾಧನಾ ಮಹೋತ್ಸವ: ಪ್ರಸಾದ ವಿತರಣೆಯಲ್ಲಿ ಭಾಗಿಯಾದ ನಟ ಶಿವರಾಮ್ - ragavendra Math
ರಾಯಚೂರಿನ ಮಂತ್ರಾಲಯದ ರಾಯರ ಮಠದಲ್ಲಿ 348ನೇ ಆರಾಧನಾ ಮಹೋತ್ಸವದಲ್ಲಿ ಹಿರಿಯ ನಟ ಶಿವರಾಮ್ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಅವರು ಭಕ್ತರಿಗೆ ಪ್ರಸಾದ ವಿತರಿಸುವ ಮೂಲಕ ರಾಯರ ಸೇವೆ ಸಲ್ಲಿಸಿದರು.
ನಟ ಶಿವರಾಂ
ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಹಿರಿಯ ನಟ ಶಿವರಾಮ್ ಅವರು ರಾಯರ 348ನೇ ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.
ರಾಯರ ಉತ್ತರಾಧನೆ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಮಠಕ್ಕೆ ಆಗಮಿಸಿದ್ದರು. ಮಠದಲ್ಲಿಯೇ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.