ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಇಂದು ನಟ ಜಗ್ಗೇಶ್ ಭೇಟಿ ನೀಡಿ, ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ಆಶಿರ್ವಾದ ಪಡೆದರು.
ರಾಯರ ಪರಮ ಭಕ್ತರಾಗಿರುವ ನಟ ಜಗ್ಗೇಶ್ ರಾಯರ ಮೂಲ ಬೃಂದಾವನಕ್ಕೆ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ, ಬಳಿಕ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರಿಂದ ಆರ್ಶಿವಾದ ಪಡೆದುಕೊಂಡು, ಕುಶಲೋಪರಿ ವಿಚಾರಿಸಿದರು.
ಮಠಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದ ಜಗ್ಗೇಶ್ ಮಠದಲ್ಲಿ ಧ್ಯಾನ ಮಾಡುತ್ತಿರುವ ಜಗ್ಗೇಶ್ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ವೈರಸ್ ಮಾನವ ನಿರ್ಮಿತ ವೈರಾಣು. ಮುಂಚೆ ಗನ್ ಮಚ್ಚುಗಳಿಂದ ಯುದ್ಧ ಮಾಡುತ್ತಿದ್ದರು. ಈಗ ಬಯೋಲಜಿಕಲ್ ವಾರ್ ಫೇರ್ ಆಗಿದೆ. ಇದಕ್ಕೆ ವಿಶ್ವವೇ ಟಾರ್ಗೆಟ್ ಆಗಿದೆ. ಇಡೀ ವಿಶ್ವದಲ್ಲಿ ರಷ್ಯಾ, ಚೀನಾ ಅಮೆರಿಕ ದೇಶಗಳದ್ದೇ ಗದ್ದಲ. ಮೂರು ದೇಶಗಳ ನಡುವೆ ನಂಬರ್ ಒನ್ ಫೈಟಿಂಗ್ ಶುರುವಾಗಿದೆ. ಇದು ವಿಶ್ವಕ್ಕೆ ಒಳ್ಳೆಯ ಬೆಳವಣಿಗೆ ಅಲ್ಲ ಎಂದರು.
ಈ ವರ್ಷ ನನ್ನ ಎರಡು ಸಿನಿಮಾಗಳು ಬರುತ್ತಿವೆ. ಮೊದಲ ಸಿನಿಮಾ ತೊತಪುರಿ ಮತ್ತು ರಂಗನಾಯಕ ಎರಡು ಸಿನಿಮಾಗಳು ಬರುತ್ತಿವೆ. ಒಂದು ಟಿವಿ ಕಾರ್ಯಕ್ರಮ ನನ್ನ ಅಚ್ಚುಮೆಚ್ಚಿನ ಕಾರ್ಯಕ್ರಮವಾಗಿದೆ ಎಂದರು.