ಕರ್ನಾಟಕ

karnataka

ETV Bharat / state

ಪ್ರಶಸ್ತಿಗಳಿಂದ ಅಪ್ಪು ಅವರ ವ್ಯಕ್ತಿತ್ವ ಹೆಚ್ಚು ಆಗಲ್ಲ, ಕಡಿಮೆಯೂ ಆಗಲ್ಲ: ನಟ ಚೇತನ್​ - ರಾಯಚೂರು ಜಿಲ್ಲಾ ಸುದ್ದಿ

ಪ್ರಶಸ್ತಿಗಳಿಂದ ಪುನೀತ್​​​ ರಾಜಕುಮಾರ್ ಅವರ ವ್ಯಕ್ತಿತ್ವ ಹೆಚ್ಚು ಆಗುವುದಿಲ್ಲ, ಕಡಿಮೆಯೂ ಆಗುವುದಿಲ್ಲ. ಅವರೊಬ್ಬ ಉತ್ತಮ ವ್ಯಕ್ತಿ. ಸಮಾಜಸೇವೆ ಮೂಲಕ ಸಾಕಷ್ಟು ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ. ಅವರಿಗೆ ಪದ್ಮಶ್ರೀ ಕೊಡುವುದು ಬಿಡುವುದು ಸರ್ಕಾರಕ್ಕೆ ಬಿಟ್ಟ ವಿಚಾರ ಎಂದು ನಟ, ಹೋರಾಟಗಾರ ಚೇತನ್​ ಹೇಳಿದರು.

By

Published : Nov 8, 2021, 7:32 PM IST

ರಾಯಚೂರು: ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರ ಪದ್ಮಶ್ರೀ ಪ್ರಶಸ್ತಿ ನೀಡಿದರೂ, ನೀಡದಿದ್ದರೂ ಯಾವುದೇ ವ್ಯತ್ಯಾಸವಿಲ್ಲ. ಅವರು ತಮ್ಮ ವ್ಯಕ್ತಿತ್ವದ ಮೂಲಕ ಇಡೀ ನಾಡಿಗೆ ಮಾದರಿಯಾಗಿದ್ದಾರೆ ಎಂದು ಚೇತನ್ ಹೇಳಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪುನೀತ್ ಅವರ ಜತೆ 14 ವರ್ಷಗಳ ಸ್ನೇಹವಿದೆ. ಇಬ್ಬರು ಒಂದೇ ಜಿಮ್​ನಲ್ಲಿ ವರ್ಕೌಟ್ ಮಾಡುತ್ತಿದ್ದೆವು. ಅವರೊಬ್ಬ ಉತ್ತಮ ವ್ಯಕ್ತಿ. ಸಮಾಜಸೇವೆ ಮೂಲಕ ಸಾಕಷ್ಟು ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ. ಶಿಕ್ಷಣಕ್ಕೆ ಕೂಡ ಸಾಕಷ್ಟು ಒತ್ತು ನೀಡಿದ್ದಾರೆ. ಉಚಿತವಾಗಿ ಸರ್ವಶಿಕ್ಷಣ ಅಭಿಯಾನ ಇನ್ನಿತರೆ ಜಾಹೀರಾತುಗಳಲ್ಲಿ ಭಾಗಿಯಾಗಿದ್ದರು. ಅವರಿಗೆ ಪದ್ಮಶ್ರೀ ಕೊಡುವುದು ಬಿಡುವುದು ಸರ್ಕಾರಕ್ಕೆ ಬಿಟ್ಟ ವಿಚಾರ. ಆದರೆ, ಪ್ರಶಸ್ತಿಗಳಿಂದ ಪುನೀತ್ ವ್ಯಕ್ತಿತ್ವ ಹೆಚ್ಚು ಆಗುವುದಿಲ್ಲ, ಕಡಿಮೆಯೂ ಆಗುವುದಿಲ್ಲ ಎಂದು ಹೇಳಿದರು‌.

ABOUT THE AUTHOR

...view details