ರಾಯಚೂರು: ಅನಧಿಕೃತವಾಗಿ ಹತ್ತಿ ಬೀಜಗಳನ್ನು ಮಾರಾಟ ಮಾಡುತ್ತಿದ್ದ ವೇಳೆ ಮಾನವಿ ಕೃಷಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಸುಮಾರು ಮೂರು ಲಕ್ಷ ರೂ. ಮೌಲ್ಯದ ಬೀಜಗಳನ್ನು ವಶಕ್ಕೆ ಪಡೆದಿದ್ದಾರೆ.
ಅನಧಿಕೃತ ಹತ್ತಿ ಬೀಜ ಮಾರಾಟ: ಆರೋಪಿ ಅರೆಸ್ಟ್ - ಮಾನವಿ ಕೃಷಿ ಇಲಾಖೆ ಅಧಿಕಾರಿಗಳು ದಾಳಿ ನ್ಯೂಸ್
ಅನಧಿಕೃತವಾಗಿ ಹತ್ತಿ ಬೀಜಗಳನ್ನು ಮಾರಾಟ ಮಾಡುತ್ತಿದ್ದ ವೇಳೆ ಮಾನವಿ ಕೃಷಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಸುಮಾರು ಮೂರು ಲಕ್ಷ ರೂ. ಮೌಲ್ಯದ ಬೀಜಗಳನ್ನು ವಶಕ್ಕೆ ಪಡೆದ ಘಟನೆ ಮಾನವಿ ತಾಲೂಕಿನಲ್ಲಿ ನಡೆದಿದೆ.
![ಅನಧಿಕೃತ ಹತ್ತಿ ಬೀಜ ಮಾರಾಟ: ಆರೋಪಿ ಅರೆಸ್ಟ್ Arrest](https://etvbharatimages.akamaized.net/etvbharat/prod-images/768-512-09:07-kn-rcr-01-seed-arrest-photo-7202440-18062020083551-1806f-1592449551-272.jpeg)
ಮಾನವಿ ತಾಲೂಕಿನ ಚಿಕಲಪರ್ವಿ ಗ್ರಾಮದ ಪೆರಯ್ಯ ಎನ್ನುವ ವ್ಯಕ್ತಿ ತನ್ನ ಮನೆಯಲ್ಲಿಯೇ ಹತ್ತಿ ಬೀಜವನ್ನು ಮಾರಾಟ ಮಾಡುತ್ತಿದ್ದಾನೆ ಎನ್ನುವ ಮಾಹಿತಿ ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ, 602 ಬೀಜದ ಪ್ಯಾಕೆಟ್‌ಗಳನ್ನು ಜಪ್ತಿ ಮಾಡಿದ್ದಾರೆ. ಇದರ ಅಂದಾಜು ಮೌಲ್ಯ ಸುಮಾರು 3,61,200 ರೂ. ಎನ್ನಲಾಗಿದೆ.
ಸದ್ಯಕ್ಕೆ ಈ ಬೀಜಗಳನ್ನು ಪರೀಕ್ಷೆಗಾಗಿ ಗಂಗಾವತಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅನಧಿಕೃತವಾಗಿ ಬೀಜಗಳನ್ನು ಮಾರಾಟ ಮಾಡುತ್ತಿದ್ದ ಪೆರಯ್ಯನ ಮೇಲೆ ಕಲಂ 420 ಐ.ಪಿ.ಸಿ. ಹಾಗೂ ಕಲಂ 3(1) ಸೀಡ್ ಕಂಟ್ರೋಲ್ ಕಾಯಿದೆ, 1983 ಮತ್ತು 54 ಸೀಡ್ ಕಾಯಿದೆ ಅನ್ವಯ ಮಾನವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
TAGGED:
ಅನಧಿಕೃತವಾಗಿ ಹತ್ತಿ ಬೀಜ ಮಾರಾಟ