ಕರ್ನಾಟಕ

karnataka

ETV Bharat / state

ಆಕಸ್ಮಿಕ ಅಗ್ನಿ ಅವಘಡ: ಒಂದು ಲಕ್ಷ ರೂ. ಮೌಲ್ಯದ ವಸ್ತುಗಳು ಭಸ್ಮ - undefined

ದೇವದುರ್ಗ ತಾಲೂಕಿನ ನಗರಗುಂಡ ಗ್ರಾಮದ ಮನೆಯೊಂದರಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಅಡುಗೆ ಸಾಮಗ್ರಿ, ಪೈಪ್ ಸೇರಿ ಒಂದು ಲಕ್ಷ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿದೆ.

ಆಕಸ್ಮಿಕ ಅಗ್ನಿ ಅವಗಡ

By

Published : Jul 18, 2019, 2:08 PM IST

ರಾಯಚೂರು: ಮನೆಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಸುಮಾರು ಒಂದು ಲಕ್ಷ ರೂ. ಮೌಲ್ಯದ ವಸ್ತುಗಳು ಭಸ್ಮವಾಗಿರುವ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ನಗರಗುಂಡ ಗ್ರಾಮದಲ್ಲಿ ಕಂಡುಬಂದಿದೆ.

ದೇವದುರ್ಗ ತಾಲೂಕಿನ ನಗರಗುಂಡ ಗ್ರಾಮದ ರಂಗಮ್ಮ ಹೈಕೂರುಗೆ ಸೇರಿದ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಡುಗೆ ಸಾಮಗ್ರಿ, ಪೈಪ್ ಸೇರಿ ಅಗತ್ಯ ವಸ್ತುಗಳು ಬೆಂಕಿಗಾಹುತಿಯಾಗಿವೆ. ಜೊತೆಗೆ ಮನೆಯಲ್ಲಿದ್ದ ಎರಡು ಆಕಳು ಕರುಗಳ ಮುಖಕ್ಕೆ ಗಾಯವಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದೆ. ಈ ಘಟನೆಯು ದೇವದುರ್ಗ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

For All Latest Updates

TAGGED:

ABOUT THE AUTHOR

...view details