ಗುರುಮಠಕಲ್: ತಾಲ್ಲೂಕಿನ ಪಸಪುಲ ಗೇಟ್ ಹತ್ತಿರ ಬುಧವಾರ ಸಂಜೆ ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದಾಗ ಬೈಕ್ನಲ್ಲಿದ್ದ ಬಾಲಕ ಲಾರಿ ಚಕ್ರಕ್ಕೆ ಸಿಲುಕಿ ಮೃತಪಟ್ಟಿರುವ ಘಟನೆ ಜರುಗಿದೆ.
ಪಸಪುಲ ಗೇಟ್ ಹತ್ತಿರ ಈ ಘಟನೆ ನಡೆದಿದ್ದು, ಮತ್ತಿಬ್ಬರು ಗಂಭೀರ ಗಾಯಗೊಂಡಿದ್ದಾರೆ. ಮೃತ ಬಾಲಕ (12) ತೆಲಂಗಾಣದ ನಾರಾಯಣಪೇಟ ಮೂಲದವನೆಂದು ತಿಳಿದು ಬಂದಿದೆ. ಬೈಕ್ನಲ್ಲಿದ್ದ ಇನ್ನಿಬ್ಬರಿಗೆ ಗಂಭಿರ ಗಾಯಗಳಾಗಿದ್ದು, ಇವರನ್ನ ಹೈವೇ ಪಾಟ್ರೋಲ್ ವಾಹನ ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಗೆ ಕಳುಹಿಸಲಾಗಿದೆ ಎಂದು ಗುರುಮಠಕಲ್ ಸಿಪಿಐ ದೇವೀಂದ್ರಪ್ಪ ದೂಳಖೇಡ್ ತಿಳಿಸಿದರು.