ರಾಯಚೂರು :ಬೈಕ್ ಮತ್ತು ಬುಲೆರೊ ಜೀಪ್ ನಡುವೆ ರಸ್ತೆ ಅಪಘಾತ ಸಂಭವಿಸಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಸಿರವಾರ ತಾಲೂಕಿನ ಕಲ್ಲೂರಿ ಗ್ರಾಮದ ಬಳಿ ಈ ದುರಂತ ಸಂಭವಿಸಿದೆ.
ಬೈಕ್ ಮತ್ತು ಬುಲೆರೊ ಜೀಪ್ ನಡುವೆ ಅಪಘಾತ ; ಸಾವನ್ನಪ್ಪಿದ ಬೈಕ್ ಸವಾರ - Accident between bike, Baloro jeep
ಜಿಲ್ಲೆಯಲ್ಲಿ ಬೈಕ್ ಮತ್ತು ಬುಲೆರೊ ಜೀಪ್ ನಡುವೆ ರಸ್ತೆ ಅಪಘಾತ ಸಂಭವಿಸಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ನಡೆದಿದೆ.
![ಬೈಕ್ ಮತ್ತು ಬುಲೆರೊ ಜೀಪ್ ನಡುವೆ ಅಪಘಾತ ; ಸಾವನ್ನಪ್ಪಿದ ಬೈಕ್ ಸವಾರ Accident Between Bike, Baloro Jeep](https://etvbharatimages.akamaized.net/etvbharat/prod-images/768-512-7949216-328-7949216-1594225231567.jpg)
ಬೈಕ್, ಬಲೊರೊ ಜೀಪ್ ನಡುವೆ ಅಪಘಾತ
ಮೃತ ಬೈಕ್ ಸವಾರನನ್ನು ಮಕ್ಬೂಲ್ ಗಧಾರ್ (55) ಎಂದು ಗುರುತಿಸಲಾಗಿದೆ. ಬೈಕ್ ಸವಾರ ಕಲ್ಲೂರಿನಿಂದ ರಾಯಚೂರಿಗೆ ತೆರಳುತ್ತಿದ್ದರು. ಆಗ ರಾಯಚೂರುನಿಂದ ಬರುತ್ತಿದ್ದ ಬುಲೆರೊ ವಾಹನ ಹಾಗೂ ಬೈಕ್ ಮಧ್ಯೆ ಮುಖಾಮುಖಿಯಾದ ಪರಿಣಾಮ ಬೈಕ್ ಸವಾರ ಮೃತಪಟ್ಟಿದ್ದಾನೆ.
ಇನ್ನು ಸಿರವಾರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.