ರಾಯಚೂರು:ಬೈಕ್ ಮತ್ತು ಸಾರಿಗೆ ಬಸ್ ನಡುವೆ ಮುಖಾ ಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.
ರಾಯಚೂರಲ್ಲಿ ಬೈಕ್ -ಬಸ್ ಮುಖಾಮುಖಿ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು - Biker died in rayachuru
ರಾಯಚೂರು ಜಿಲ್ಲೆಯ ಹೆಸರೂರು ಗ್ರಾಮದ ಬಳಿ ಬೈಕ್ ಮತ್ತು ಬಸ್ ನಡುವೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮೃತ ಬೈಕ್ ಸವಾರ
ಜಿಲ್ಲೆಯ ಲಿಂಗಸೂಗುರು ತಾಲೂಕಿನ ಚಿಕ್ಕ ಹೆಸರೂರು ಗ್ರಾಮದ ಬಳಿ ಈ ದುರ್ಘಟನೆ ನಡೆದಿದೆ. ರಾಜಶೇಖರ್ ರೆಡ್ಡಿ (30) ಮೃತ ಬೈಕ್ ಸವಾರ ಎಂದು ಗುರುತಿಸಲಾಗಿದೆ. ಇಲಾಲಪೂರ ಗ್ರಾಮದಿಂದ ದಿಂದ ಲಿಂಗಸೂಗೂರು ಪಟ್ಟಣಕ್ಕೆ ತೆರಳುವ ವೇಳೆ ಈ ಅಪಘಾತ ಸಂಭವವಿದೆ.