ರಾಯಚೂರು: ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಬೆಳ್ಳಂಬೆಳಗ್ಗೆ ರಾಯಚೂರಿನಲ್ಲಿ ಎಸಿಬಿ ದಾಳಿ ನಡೆಸಿದೆ.
ರಾಯಚೂರಲ್ಲಿ ಬೆಳ್ಳಂಬೆಳಗ್ಗೆ ಎಸಿಬಿ ಶಾಕ್: ನಗರಾಭಿವೃದ್ಧಿ ಇಲಾಖೆ ಎಇಇ ಮನೆ ಮೇಲೆ ರೇಡ್ - ರಾಯಚೂರು ಎಸಿಬಿ ದಾಳಿ ಸುದ್ದಿ
ರಾಯಚೂರು ನಗರಾಭಿವೃದ್ದಿ ಕೋಶ ಇಲಾಖೆ ಎಕ್ಸಿಕ್ಯೂಟಿವ್ ಎಂಜಿನಿಯರ್ ಮಲ್ಲಿಕಾರ್ಜುನ ಗೋಪಿಶೆಟ್ಟಿ ಮನೆ, ಕಚೇರಿ, ಪೆಟ್ರೋಲ್ ಪಂಪ್, ಟ್ರ್ಯಾಕ್ಟರ್ ಶೋರೂಂ ಮೇಲೆ ಏಕ ಕಾಲಕ್ಕೆ ಎಸಿಬಿ ದಾಳಿ ನಡೆಸುವ ಮೂಲಕ ಎಸಿಬಿ ಶಾಕ್ ನೀಡಿದೆ.
ರಾಯಚೂರು ನಗರಾಭಿವೃದ್ದಿ ಕೋಶ ಇಲಾಖೆ ಎಕ್ಸಿಕ್ಯೂಟಿವ್ ಎಂಜಿನಿಯರ್ (ಎಇ) ಮಲ್ಲಿಕಾರ್ಜುನ ಗೋಪಿಶೆಟ್ಟಿ ಮನೆ, ಕಚೇರಿ, ಪೆಟ್ರೋಲ್ ಪಂಪ್, ಟ್ರ್ಯಾಕ್ಟರ್ ಶೋರೂಂ ಮೇಲೆ ಏಕ ಕಾಲಕ್ಕೆ ಎಸಿಬಿ ದಾಳಿ ನಡೆಸುವ ಮೂಲಕ ಎಸಿಬಿ ಶಾಕ್ ನೀಡಿದೆ.
ಸರ್ಕಾರ ಕರ್ತವ್ಯ ನಿರ್ವಹಿಸುತ್ತಿರುವ ಮಲ್ಲಿಕಾರ್ಜುನ ಗೋಪಿಶೆಟ್ಟಿ ತಮ್ಮ ವೇತನಕ್ಕಿಂತ ಹೆಚ್ಚಾಗಿ ಅಕ್ರಮವಾಗಿ ಆಸ್ತಿ ಗಳಿಕೆ ದೂರಿನ ಹಿನ್ನೆಲೆಯಲ್ಲಿ ರಾಯಚೂರು ಡಿವೈಎಸ್ಪಿ ಸಂತೋಷ ಬನ್ನಟ್ಟಿ ನೇತೃತ್ವದಲ್ಲಿ ನಾಲ್ಕು ತಂಡ, ಜಿಲ್ಲಾಧಿಕಾರಿ ಆವರಣದಲ್ಲಿನ ಕಚೇರಿ, ಐಡಿಎಂಸಿ ಲೇಔಟ್ ನಲ್ಲಿರುವ ಮನೆ ಹಾಗೂ ಟ್ರ್ಯಾಕ್ಟರ್ ಶೋರೂಂ, ಪೆಟ್ರೋಲ್ ಪಂಪ್ ಮೇಲೆ ದಾಳಿ ನಡೆಸಿ, ದಾಖಲೆಗಳನ್ನ ಪರಿಶೀಲನೆ ನಡೆಸುತ್ತಿದೆ.