ಕರ್ನಾಟಕ

karnataka

ETV Bharat / state

ಲಂಚಕ್ಕೆ ಬೇಡಿಕೆ: ಎಸಿಬಿ ಬಲೆಗೆ ಬಿದ್ದ ಮುದಗಲ್‌ ಪುರಸಭೆ ವಾಲ್‌ಮನ್​ - Mudgal Municipality of Raichur District

ಗೃಹಭಾಗ್ಯ ಯೋಜನೆಯಡಿ ಹಣ ಬಿಡುಗಡೆಗೆ ಲಂಚ ಕೇಳಿದ ರಾಯಚೂರು ಜಿಲ್ಲೆಯ ಮುದಗಲ್ ಪುರಸಭೆಯ ವಾಲ್‌ಮನ್ ವೆಂಕಟೇಶ ಅವರನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

Raichur
ಲಂಚಕ್ಕೆ ಬೇಡಿಕೆಯಿಟ್ಟಿದ್ದ ಪುರಸಭೆ ವಾಲ್‌ಮನ್​​ ಎಸಿಬಿ ಬಲೆಗೆ

By

Published : Apr 28, 2021, 6:48 AM IST

ರಾಯಚೂರು:ಗೃಹಭಾಗ್ಯ ಯೋಜನೆಯಡಿ ಹಣ ಬಿಡುಗಡೆಗೆ ಲಂಚಕ್ಕೆ ಕೈ ಚಾಚಿದ ಪುರಸಭೆ ವಾಲ್‌ಮನ್ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಜಿಲ್ಲೆಯ ಮುದಗಲ್ ಪುರಸಭೆಯ ವಾಲ್‌ಮನ್ ವೆಂಕಟೇಶ ಗೃಹಭಾಗ್ಯ ಯೋಜನೆಯಡಿ 2 ಲಕ್ಷ ರೂ. ಚೆಕ್ ನೀಡುವುದಕ್ಕೆ ಫಲಾನುಭವಿಯಿಂದ 20 ಸಾವಿರ ರೂ. ಕೇಳಿದ್ದಾರೆ. ಇದರಿಂದ ಬೇಸರಗೊಂಡ ಫಲಾನುಭವಿ, ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು.

ಈ ದೂರು ಆಧರಿಸಿ ಎಸಿಬಿ ತಂಡ, ಕಚೇರಿಯಲ್ಲಿ ವಾಲ್‌ಮನ್ ಲಂಚ ಪಡೆಯುವ ವೇಳೆ ದಾಳಿ ಮಾಡಿದ್ದಾರೆ.

ಇದನ್ನೂ ಓದಿ:ಕೊರೊನಾ ಲಾಕ್​ಡೌನ್​: ಬೇಸರದಿಂದ ಹೊರಬರಲು ಎಮ್ಮೆ ಸಾಕಣೆಗೆ ಮುಂದಾದ ಸ್ನಾತಕೋತ್ತರ ವಿದ್ಯಾರ್ಥಿ!

ABOUT THE AUTHOR

...view details