ರಾಯಚೂರು: ಸಿಂಧನೂರು ಪಟ್ಟಣದಲ್ಲಿನ ನಗರಸಭೆ ಕಚೇರಿಯ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ದಾಳಿ ನಡೆಸಿದರು.
ಸಿಂಧನೂರು ನಗರಸಭೆ ಕಚೇರಿ ಮೇಲೆ ಎಸಿಬಿ ದಾಳಿ - ACB attack on municipal office
ಸಾರ್ವಜನಿಕ ಕೆಲಸಕ್ಕೆ ನಗರಸಭೆಯಲ್ಲಿ ಲಂಚ ಪಡೆಯುತ್ತಿದ್ದಾರೆ ಎಂಬ ಆರೋಪದ ಮೇರೆಗೆ ಸಿಂಧನೂರು ನಗರಸಭೆ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದರು.
![ಸಿಂಧನೂರು ನಗರಸಭೆ ಕಚೇರಿ ಮೇಲೆ ಎಸಿಬಿ ದಾಳಿ ACB attack on municipal office on bribery charges](https://etvbharatimages.akamaized.net/etvbharat/prod-images/768-512-7830869-623-7830869-1593508543809.jpg)
ನಗರಸಭೆ ಕಚೇರಿಯ ಮೇಲೆ ಎಸಿಬಿ ದಾಳಿ
ಸಾರ್ವಜನಿಕ ಕೆಲಸಕ್ಕೆ ನಗರಸಭೆಯಲ್ಲಿ ಅಧಿಕಾರಿಗಳು, ಸಿಬ್ಬಂದಿ ಲಂಚ ಪಡೆಯುತ್ತಿದ್ದಾರೆ ಹಾಗೂ ಅಕ್ರಮ ನಡೆಯುತ್ತಿದೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ.
ಡಿವೈಎಸ್ಪಿ ನೇತೃತ್ವದಲ್ಲಿ 10 ಜನ ಪಿಎಸ್‌ಐ ಹಾಗೂ 40 ಸಿಬ್ಬಂದಿ ಕಚೇರಿಗೆ ಬಂದಿದ್ದು ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.
Last Updated : Jun 30, 2020, 3:34 PM IST