ರಾಯಚೂರು :ಪ್ರಧಾನಿಮೋದಿ, ಗೃಹ ಸಚಿವ ಅಮಿತ್ ಶಾ ವಿರುದ್ಧ ಮಾತನಾಡುವವರಿಗೆ ಗೌರಿ ಲಂಕೇಶರಿಗೆ ಆದ ಗತಿಯಾಗುತ್ತದೆ ಎಂದು ಆಂದೋಲಾ ಶ್ರೀ ಪ್ರಚೋದನಕಾರಿ ಭಾಷಣ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮೋದಿ,ಶಾ ವಿರುದ್ಧ ಮಾತಾಡುವವರಿಗೆ ಗೌರಿ ಲಂಕೇಶ್ಗೆ ಆದ ಗತಿಯಾಗುತ್ತದೆ: ಆಂದೋಲಾ ಶ್ರೀ - aandola sri statment
ಮೋದಿ, ಶಾ ವಿರುದ್ಧ ಮಾತನಾಡುವವರಿಗೆ ಗೌರಿ ಲಂಕೇಶ್ಗೆ ಆದ ಗತಿಯಾಗುತ್ತದೆ ಎಂದು ರಾಯಚೂರಿನಲ್ಲಿ ಆಂದೋಲಾ ಶ್ರೀಗಳಾದ ಸಿದ್ದಲಿಂಗ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಆಂದೋಲಾ ಶ್ರೀಗಳ ವಿವಾದಾತ್ಮಕ ಹೇಳಿಕೆ
ರಾಯಚೂರು ತಾಲೂಕಿನ ಶಕ್ತಿನಗರದಲ್ಲಿ ಫೆಬ್ರುವರಿ 2 ರಂದು ನಡೆ ಧರ್ಮಸಮ್ಮೇಳನದಲ್ಲಿ ಸಿದ್ದಲಿಂಗ ಸ್ವಾಮೀಜಿ ಈ ಹೇಳಿಕೆ ನೀಡಿದ್ದಾರೆ. ಇಲ್ಲಿನ ಭಾರತ ಯುವ ವಿವೇಕ ಸಂಘದಿಂದ ಆಯೋಜಿಸಿದ್ದ ಧರ್ಮಸಮ್ಮೇಳನದಲ್ಲಿ ಮಾತನಾಡುತ್ತಾ, 14-15 ವಯಸ್ಸಿನವರು, ಇನ್ನೂ ಮೂರು ಗೇಣಿಲ್ಲ ಆದ್ರೆ, ಮೋದಿ, ಅಮಿತ್ ಶಾ ಬಗ್ಗೆ ಕೆಟ್ಟ ಶಬ್ಧಗಳಲ್ಲಿ ಮಾತನಾಡುತ್ತಾರೆ. ಹೀಗೆ ಮಾಡಿದ್ರೆ ಅವರಿಗೂ ಗೌರಿ ಲಂಕೇಶರಿಗೆ ಆದ ಸ್ಥಿತಿಯಾಗುತ್ತೆ ಎಂದು ಹೇಳಿದ್ದಾರೆ. ಶ್ರೀಗಳ ಭಾಷಣದ ತುಣುಕು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.