ಕರ್ನಾಟಕ

karnataka

ETV Bharat / state

ಕೆಲಸದಿಂದ ವಜಾಗೊಳಿಸಿದ ಖಾಸಗಿ ಕಂಪನಿ.. ಮನನೊಂದು ಯುವಕ ಆತ್ಮಹತ್ಯೆ

ಖಾಸಗಿ ಕಂಪನಿಯೊಂದು ಯುವಕನೊಬ್ಬನನ್ನು ಕೆಲಸದಿಂದ ವಜಾಗೊಳಿಸಿತ್ತು. ಈ ಹಿನ್ನೆಲೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.

young man committed suicide in Raichur, Raichur crime news, Private company worker suicide in Raichur, ರಾಯಚೂರಿನಲ್ಲಿ ಯುವಕ ಆತ್ಮಹತ್ಯೆಗೆ ಶರಣು, ರಾಯಚೂರು ಅಪರಾಧ ಸುದ್ದಿ, ರಾಯಚೂರಿನಲ್ಲಿ ಖಾಸಗಿ ಕಂಪನಿ ಕೆಲಸಗಾರ ಆತ್ಮಹತ್ಯೆ,
ಯುವಕ

By

Published : Apr 6, 2022, 9:16 AM IST

ರಾಯಚೂರು: ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನನ್ನು ಕೆಲಸದಿಂದ‌ ತೆಗೆದು ಹಾಕಿದ್ದರಿಂದ ಮನನೊಂದು ಯುವಕ ನೇಣಿಗೆ ಶರಣಾಗಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಯುವಕ

ಜಿಲ್ಲೆಯ ಮಸ್ಕಿ ಪಟ್ಟಣದ ಒಂದನೇ ವಾರ್ಡ್‌ನಿ ನಿವಾಸಿ ರವಿತೇಜ(25) ಆತ್ಮಹತ್ಯೆ ಮಾಡಿಕೊಂಡಿರುವ ಯುವಕನಾಗಿದ್ದಾನೆ. ರವಿತೇಜ ಕಳೆದ ಮೂರು ವರ್ಷಗಳಿಂದ‌ ಬೆಂಗಳೂರಿನ‌ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಆದರೆ, 15 ದಿನಗಳ ಹಿಂದೆ ಕೆಲಸದಿಂದ ತೆಗೆದು ಹಾಕಿದೆ. ಇದರಿಂದ ಮನನೊಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗುತ್ತಿದೆ.

ಓದಿ:ಲವ್ ವಿಚಾರಕ್ಕೆ ಲೈಟ್ ಬಾಯ್ ಹತ್ಯೆ ಕೇಸ್: ಗುಂಡ್ಲುಪೇಟೆ ಪೊಲೀಸರಿಂದ ಇಬ್ಬರು ಅರೆಸ್ಟ್

ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು. ಬಳಿಕ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಮಸ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ABOUT THE AUTHOR

...view details