ರಾಯಚೂರು:ಮದುವೆ ಸಮಾರಂಭದಲ್ಲಿ ಬಳೆ ಹಾಕಲು ತೆರಳುತ್ತಿದ್ದ ಮಹಿಳೆ ಮೇಲೆ ಲಾರಿ ಹರಿದು ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ.
ಚಂದ್ರಬಂಡಾ ಗ್ರಾಮದ ಬೀಬೀ ಮಹೆಬೂಬ್(27) ಮೃತ ಮಹಿಳೆ. ಬಳೆ ವ್ಯಾಪಾರ ಮಾಡುತ್ತಿದ್ದ ಇವರು ಇಂದು ಬೆಳಗ್ಗೆ 9.30ರ ಸುಮಾರಿಗೆ ಯರಮರಸ್ ಕ್ಯಾಂಪ್ನಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭದಲ್ಲಿ ಬಳೆ ಹಾಕಲು ಎಂದು ತಮ್ಮ ವಾಹನದಲ್ಲಿ ತೆರಳುತ್ತಿದ್ದರು. ಇದೇ ವೇಳೆ ಹೈದರಾಬಾದ್ ನಿಂದ ಬರುತ್ತಿದ್ದ ಲಾರಿಯೊಂದು ಮಹಿಳೆಯ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಬೀಬಿ ಮಹೆಬೂಬ್ ಅವರು ಕೆಳ ಬಿದ್ದಿದ್ದಾರೆ. ಈ ವೇಳೆ ಅವರ ಮೇಲೆ ಲಾರಿ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.