ರಾಯಚೂರು: ಲಿಂಗಸಗೂರಿನ ವೃದ್ಧೆಯೊಬ್ಬರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಆದ್ರೆ ವರದಿ ಬರುವ ಮೊದಲೇ ಆಕೆ ಸಾವನ್ನಪ್ಪಿದ್ದಾರೆ.
ಲಿಂಗಸುಗೂರಲ್ಲಿ ಗಂಟಲು ದ್ರವದ ಪರೀಕ್ಷಾ ವರದಿ ಬರುವ ಮುನ್ನವೇ ವೃದ್ಧೆ ಸಾವು - corona latest update
ಕೆಮ್ಮು, ದಮ್ಮು, ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ವೃದ್ಧೆ ರಾಯಚೂರು ಜಿಲ್ಲೆಯಲ್ಲಿ ಮೃತಪಟ್ಟಿದ್ದಾರೆ. ಗಂಟಲು ದ್ರವದ ವರದಿ ಬರುವ ಮುನ್ನವೇ ರೋಗಿ ಇಂದು ಕೊನೆಯುಸಿರೆಳೆದಿದ್ದಾರೆ.
ಗಂಟಲು ದ್ರವ ಪರೀಕ್ಷೆ ವರದಿ ಬರುವ ಮುನ್ನ ಸಾವಿಗೀಡಾದ ಮಹಿಳೆ
ಕೆಮ್ಮು, ದಮ್ಮು, ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ವೃದ್ಧೆ, ಲಿಂಗಸುಗೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೊರೊನಾ ಸೋಂಕಿನ ಶಂಕೆ ಹಿನ್ನೆಲೆ ಗಂಟಲು ದ್ರವವನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಆದರೆ, ಈಗ ವೃದ್ಧೆ ಮೃತಪಟ್ಟಿದ್ದಾರೆ. ಮೃತದೇಹವನ್ನ ಕುಟುಂಬಸ್ಥರಿಗೆ ನೀಡಲು ಹಿರಿಯ ವೈದ್ಯಾಧಿಕಾರಿಗಳು ಚರ್ಚೆ ಆರಂಭಿಸಿದ್ದಾರೆ.
ಮಹಿಳೆ ಮೃತಪಟ್ಟು 14 ತಾಸುಗಳಾದರೂ ಕೂಡ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡದಿರುವುದು ಭೀತಿ ಹುಟ್ಟಿಸಿದೆ.