ರಾಯಚೂರು:ಅನಾರೋಗ್ಯದ ಕಾರಣ ಇಲ್ಲಿನ ರಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಈ ಮಹಿಳೆಯಿಂದ ಸಂಗ್ರಹಿಸಿದ್ದ ಗಂಟಲು ದ್ರವ ಹಾಗೂ ರಕ್ತದ ಮಾದರಿ ಟೆಸ್ಟ್ ರಿಪೋರ್ಟ್ ಬಂದಿದ್ದು, ಕೊರೊನಾ ವಿರುದ್ಧ ನೆಗೆಟಿವ್ ಎಂದು ತಿಳಿದು ಬಂದಿದೆ. ಹೀಗಾಗಿ ಜಿಲ್ಲೆಯ ಜನರಲ್ಲಿದ್ದ ಆತಂಕ ದೂರವಾಗಿದೆ.
ಮಸ್ಕಿ ಮೂಲದ ರೇಣುಕಾ (40) ಇಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಕೊರೊನಾ ಶಂಕೆ ವ್ಯಕ್ತವಾದ ಕಾರಣ ರಕ್ತ, ಗಂಟಲು ದ್ರವದ ಮಾದರಿ ಪರೀಕ್ಷೆಗೊಳಪಡಿಸಲಾಗಿತ್ತು. ಆದರೆ ಟೆಸ್ಟ್ ನೆಗೆಟಿವ್ ಬಂದಿರುವ ಕಾರಣ ಸಾವಿಗೆ ಕಾರಣ ಕೊರೊನಾ ಸೋಂಕು ಕಾರಣ ಅಲ್ಲ ಎಂಬುದು ಕನ್ಫರ್ಮ್ ಆಗಿದೆ.