ರಾಯಚೂರು: ಕೊರೊನಾ ಸೋಂಕಿತ ಮಹಿಳೆ ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ.
ನಗರದ ಕೋವಿಡ್-19 ವಾರ್ಡ್ ಚಿಕಿತ್ಸೆ ಪಡೆಯುತ್ತಿದ್ದ ಸುಮಾರು 45 ವರ್ಷದ ಸೋಂಕಿತ ಮಹಿಳೆ ಮೃತಪಟ್ಟಿದ್ದಾರೆ. ಮೃತ ಮಹಿಳೆ ಮಾನವಿ ಪಟ್ಟಣದ ನಿವಾಸಿಯಾಗಿದ್ದು, ಇವರು ನ್ಯುಮೋನಿಯಾ, ಅಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದರು.

ಸೋಂಕಿತರ ಸಂಪರ್ಕದಿಂದ ಮಹಿಳೆಗೆ ಕೊರೊನಾ ಸೋಂಕು ತಗಲಿತ್ತು ಎನ್ನಲಾಗುತ್ತಿದೆ. ಸೋಂಕು ಇರುವುದು ಪತ್ತೆಯಾದ ಕೂಡಲೇ ಕೋವಿಡ್-19 ಚಿಕಿತ್ಸೆಗೊಳಪಡಿಸಲಾಗಿತ್ತು.
ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ. ಮಹಿಳೆ ಸಾವಿಗೆ ಕೊರೊನಾ ಸೋಂಕು ಕಾರಣವಾ ಅಥವಾ ಬೇರೆ ಕಾಯಿಲೆಯಿಂದ ಮೃತಪಟ್ಟರಾ ಎನ್ನುವುದನ್ನು ಪರಿಶೀಲಿಸಿ ತಜ್ಞರ ಸಮಿತಿ ಮಾಹಿತಿ ನೀಡಲಿದೆ. ಸದ್ಯ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಾವಿನ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ.