ಕರ್ನಾಟಕ

karnataka

ETV Bharat / state

ರಾಯಚೂರಿನಲ್ಲಿ ಸರಳ ದಸರಾ ಆಚರಣೆ: ಜನ ದಟ್ಟಣೆಗೆ ಬ್ರೇಕ್​!

ರಾಯಚೂರು ನಗರಸಭೆಯಿಂದ 30 ನೇ ವರ್ಷದ ದಸರಾ ಆಚರಣೆಯನ್ನು ಸರಳವಾಗಿ ಮಾಡಿ ಮುಗಿಸಲಾಯಿತು. ನಾಡ ದೇವತೆ ಚಾಮುಂಡೇಶ್ವರಿ ಭಾವಚಿತ್ರಕ್ಕೆ 1,008 ಶ್ರೀ ಕಿಲ್ಲೆ ಬ್ರಹನ್ಮಠದ ಶಾಂತಮಲ್ಲ ಶಿವಾಚಾರ್ಯ ಪೂಜೆ ಸಲ್ಲಿಸುವ ಮೂಲಕ ದಸರಾ ಉತ್ಸವಕ್ಕೆ ಚಾಲನೆ ನೀಡಿದರು.

raichur
ನಗರಸಭೆಯಿಂದ ಸರಳ ದಸರಾ ಆಚರಣೆ

By

Published : Oct 26, 2020, 7:48 PM IST

ರಾಯಚೂರು:ನಗರಸಭೆಯಿಂದ 30ನೇ ವರ್ಷದ ದಸರಾ ಆಚರಣೆಯನ್ನು ಸರಳವಾಗಿ ನಾಡ ದೇವತೆ ಚಾಮುಂಡೇಶ್ವರಿ ಭಾವಚಿತ್ರಕ್ಕೆ 1,008 ಶ್ರೀ ಕಿಲ್ಲೆ ಬ್ರಹನ್ಮಠದ ಶಾಂತಮಲ್ಲ ಶಿವಾಚಾರ್ಯ ಪೂಜೆ ಸಲ್ಲಿಸುವ ಮೂಲಕ ದಸರಾ ಉತ್ಸವಕ್ಕೆ ಚಾಲನೆ ನೀಡಿದರು.

ನಗರಸಭೆ ಆವರಣದಲ್ಲಿ ಸರಳವಾಗಿ ಆಯೋಜಿಸಲಾಗಿದ್ದ ನಾಡದೇವತೆ ಚಾಮುಂಡೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು ಈ ವರ್ಷ ಪ್ರಾರಂಭದಿಂದ ಕೊರೊನಾ ಹೆಮ್ಮಾರಿ ನಮ್ಮನ್ನು ಕಾಡುತ್ತಿದ್ದು, ಎಲ್ಲ ಹಬ್ಬ- ಹರಿದಿನಗಳು ಮನೆಗೆ ಸೀಮಿತವಾಗಿದೆ. ಕಳೆದ ಮೂವತ್ತು ವರ್ಷಗಳಿಂದ ನಗರಸಭೆಯಿಂದ ಆಚರಿಸಲ್ಪಡುತ್ತಿದ್ದ ದಸರಾ ಉತ್ಸವ ಸಂಪ್ರದಾಯ ಬದ್ಧವಾಗಿ ಸರಳವಾಗಿ ಇಂದು ಆಚರಿಸುವಂತೆ ಮಾಡಿದೆ ಎಂದರು.

ದೇವಿಯ ಭಾವ ಚಿತ್ರ ಪೂಜೆಯ ಮೂಲಕ ರಾಯಚೂರು ನಗರಸಭೆಯಿಂದ 30 ನೇ ವರ್ಷದ ದಸರಾ ಆಚರಣೆ ಮಾಡಲಾಯಿತು.

ಜನರು ಕೊರೊನಾ ರೋಗಕ್ಕೆ ಔಷಧ ಬರುವವರೆಗೂ ಸಾರ್ವಜನಿಕರು ಬಹಳ ಎಚ್ಚರಿಕೆಯಿಂದಿರಬೇಕು. ಸಾರ್ವಜನಿಕವಾಗಿ ಓಡಾಟದ ಸಮಯದಲ್ಲಿ ಮಾಸ್ಕ್​ ಕಡ್ಡಾಯವಾಗಿ ಬಳಸಬೇಕು, ಸಾಮಾಜಿಕ ಅಂತರದಲ್ಲಿ ವ್ಯವಹಾರ ನಡೆಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ನಗರಸಭೆಯ ಹಿರಿಯ ಸದಸ್ಯ ಜಯಣ್ಣ ಸೇರಿದಂತೆ ನಗರಸಭೆ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

ABOUT THE AUTHOR

...view details