ಕರ್ನಾಟಕ

karnataka

ETV Bharat / state

ರಾಯಚೂರಲ್ಲಿ ಇಂದು 142 ಜನರ ಸ್ಯಾಂಪಲ್​ ಪರೀಕ್ಷೆಗೆ ರವಾನೆ - ಫಿವರ್ ಕ್ಲಿನಿಕ್‍

ರಾಯಚೂರಲ್ಲಿ ಈವರೆಗೆ ಒಟ್ಟು 1,928 ಮಂದಿಯ ಗಂಟಲು ದ್ರವದ ಮಾದರಿಗಳನ್ನು ಪರೀಕ್ಷಗೆ ಕಳುಹಿಸಿಲಾಗಿದೆ. ಇದರಲ್ಲಿ 1,660 ವರದಿಗಳು ನೆಗೆಟಿವ್ ಬಂದರೆ, ಉಳಿದ 263 ವರದಿಗಳು ಇನ್ನೂ ಬರಬೇಕಿದೆ.

A sample of 142 peoples was sent to examine in Raichur today
ರಾಯಚೂರಲ್ಲಿ ಇಂದು 142 ಜನರ ಸ್ಯಾಂಪಲ್​ ಪರೀಕ್ಷೆಗೆ ರವಾನೆ

By

Published : May 6, 2020, 8:48 PM IST

ರಾಯಚೂರು: ಜಿಲ್ಲೆಯಿಂದ ಇಂದು 142 ಮಂದಿಯ ರಕ್ತ ಹಾಗೂ ಗಂಟಲಿನ ದ್ರವದ ಮಾದರಿಗಳನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಈ ನಡುವೆ 197 ಮಾದರಿಗಳ ವರದಿ ನೆಗೆಟಿವ್ ಬಂದಿವೆ. ಜಿಲ್ಲೆಯಿಂದ ಇದುವರೆಗೆ 1,928 ಮಾದರಿಗಳನ್ನು ಪರೀಕ್ಷೆಗೆ ರವಾನಿಸಲಾಗಿದ್ದು, 1,660 ವರದಿಗಳು ನೆಗೆಟಿವ್ ಬಂದಿವೆ. ಉಳಿದ 263 ಸ್ಯಾಂಪಲ್‍ಗಳ ವರದಿ‌ ಬರುವುದು ಬಾಕಿಯಿದೆ.

ಫೀವರ್ ಕ್ಲಿನಿಕ್‍ಗಳಲ್ಲಿಂದು 456 ಜನರನ್ನು ಥರ್ಮಲ್ ಸ್ಕ್ರೀನಿಂಗ್‍ಗೆ ಒಳಪಡಿಸಲಾಗಿದೆ. 155 ಜನರನ್ನು ಸರ್ಕಾರಿ ಕ್ವಾರಂಟೈನ್‍ಲ್ಲಿರಿಸಿ ಅವರ ಮೇಲೆ ನಿಗಾ ವಹಿಸಲಾಗಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

ABOUT THE AUTHOR

...view details