ಕರ್ನಾಟಕ

karnataka

ETV Bharat / state

ಡಕಾಯಿತ ತಂಡದೊಂದಿಗೆ ಸಂಪರ್ಕ: ಕಾನ್ಸ್​ಟೇಬಲ್​ ಸೆರೆ - SP Dr.C.B.Vedamoorthy

ಡಕಾಯಿತ ತಂಡದೊಂದಿಗೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ರಾಯಚೂರಿನ ಶಕ್ತಿನಗರ ಠಾಣೆ ಪೇದೆ ಬಸವರಾಜನನ್ನ ಬಂಧಿಸಲಾಗಿದೆ ಎಂದು ಎಸ್​ಪಿ ಡಾ.ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.

A police constable arrest in raichur
ಡಕಾಯಿತ ತಂಡದೊಂದಿಗೆ ಸಂಪರ್ಕ..ಓರ್ವ ಪೊಲೀಸ್​ ಪೇದೆ ಅರೆಸ್ಟ್​

By

Published : May 24, 2020, 3:54 PM IST

ರಾಯಚೂರು:ವೈಟಿಪಿಎಸ್ ಗುತ್ತಿಗೆದಾರನಿಗೆ ಮಾರಾಕಾಸ್ತ್ರಗಳಿಂದ ಬೆದರಿಸಿ ಹಣ ವಸೂಲಿ ಮಾಡಿದ್ದ ಡಕಾಯಿತ ತಂಡದೊಂದಿಗೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಓರ್ವ ಪೊಲೀಸ್ ಕಾನ್ಸ್ಟೇಬಲ್​ನನ್ನು ಬಂಧಿಸಲಾಗಿದೆ ಎಂದು ಎಸ್​ಪಿ ಡಾ.ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.

ಡಕಾಯಿತ ತಂಡದೊಂದಿಗೆ ಸಂಪರ್ಕ.. ಕಾನ್ಸ್ಟೇಬಲ್​ ಅರೆಸ್ಟ್​

ಶಕ್ತಿನಗರ ಠಾಣೆ ಪೇದೆ ಬಸವರಾಜ ಬಂಧಿತ ಆರೋಪಿ. ಕೇರಳ ಮೂಲದ ವೈಟಿಪಿಎಸ್ ಗುತ್ತಿಗೆದಾರ ಹರ್ಷನ್​ಗೆ ಡಕಾಯಿತ ತಂಡ ಬೆದರಿಸಿ,30 ಲಕ್ಷಕ್ಕೆ ಬೇಡಿಕೆಯಿಟ್ಟಿದ್ರು. ಈ ಸಂಬಂಧ ಶಕ್ತಿನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣವನ್ನ ಭೇದಿಸಿದ ಪೊಲೀಸರು, ಈಗಾಗಲೇ 15 ಜನರನ್ನು ಬಂಧಿಸಿ ತನಿಖೆಯನ್ನ ಮುಂದುವರೆಸಿದ್ದರು.

ತನಿಖೆ ವೇಳೆ ಬಂಧಿತ ಆರೋಪಿಗಳೊಂದಿಗೆ ಪೊಲೀಸ್ ಪೇದೆ ಬಸವರಾಜ ಸಂಪರ್ಕ ಹೊಂದಿರುವುದು ಬೆಳಕಿಗೆ ಬಂದಿದ್ದು, ಪೇದೆಯನ್ನ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದರು.

ABOUT THE AUTHOR

...view details