ಕರ್ನಾಟಕ

karnataka

ETV Bharat / state

ಠಾಣೆಯಲ್ಲಿ ಮೇಜು ಕುಟ್ಟಿ ಪೊಲೀಸರಿಗೆ ಆವಾಜ್​ ಹಾಕಿದ ಭೂಪ...ವಿಡಿಯೋ ವೈರಲ್ - Insult to police

ದೇವದುರ್ಗ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೊಬ್ಬ ಟೇಬಲ್​ ಬಡಿದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಈ ವೇಳೆ ಕ್ರಮ ಕೈಗೊಳ್ಳಬೇಕಾದ ಪೊಲೀಸರು ಮೌನವಹಿಸಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದೆ.

a person abused to police in raichur
ಠಾಣೆಯಲ್ಲಿ ಮೇಜು ಕುಟ್ಟಿ ಅವಾಜ್​ ಹಾಕಿದ ಭೂಪ

By

Published : Sep 29, 2020, 7:39 PM IST

ರಾಯಚೂರು: ಜಿಲ್ಲೆಯ ದೇವದುರ್ಗ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೋರ್ವ ಟೇಬಲ್ ಬಡಿಯುವ ಮೂಲಕ ಪೊಲೀಸರಿಗೆ ಆವಾಜ್ ಹಾಕಿದ್ದಾನೆ ಎನ್ನಲಾದ ವಿಡಿಯೋ ವೈರಲ್ ಆಗಿದೆ.

ಪೊಲೀಸರಿಗೆ ಅವಾಜ್​ ಹಾಕಿದ ವ್ಯಕ್ತಿ

ಮಲ್ಲೇಶ್ ಪೂಜಾರಿ ಎಂಬಾತ ಠಾಣೆಯಲ್ಲಿ ಟೇಬಲ್ ಬಡಿದು ಆವಾಜ್ ಹಾಕಿರುವುದು ಅಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ಹೇಳಲಾಗಿದೆ. ನಿನ್ನೆ ಠಾಣೆಯಲ್ಲಿ ಪೊಲೀಸರು ದೂರು ಸ್ವೀಕರಿಸದೇ ಇರದ ಕಾರಣ ಬೈದಿದ್ದಾನೆ ಎಂದು ತಿಳಿದು ಬಂದಿದೆ.

ABOUT THE AUTHOR

...view details