ಕರ್ನಾಟಕ

karnataka

ETV Bharat / state

ಮುದ್ದಾದ ಮೂರು ಗಂಡು ಮಕ್ಕಳೊಂದಿಗೆ ಕಾಲುವೆಗೆ ಹಾರಿದ ತಾಯಿ! -

ರಾಯಚೂರು ಜಿಲ್ಲೆಯ ಹೃದಯ ವಿದ್ರಾವಕ ಘಟನೆ‌ಯೊಂದು ನಡೆದಿದೆ. ಕೌಟುಂಬಿಕ ಕಲಹ  ಬೇಸತ್ತು ತಾಯಿ, ಮೂರು ಗಂಡು ಮಕ್ಕಳು ಆತ್ಮಹತ್ಯೆ ಶರಣಾಗಿದ್ದಾರೆ.

ಮೂರು ಗಂಡು ಮಕ್ಕಳೊಂದಿಗೆ ನದಿಗೆ ಹಾರಿದ ತಾಯಿ

By

Published : Aug 21, 2019, 1:48 PM IST

Updated : Aug 21, 2019, 3:29 PM IST

ರಾಯಚೂರು: ಕೌಟುಂಬಿಕ ಕಲಹ, ಮಾನಸಿಕ ಚಿತ್ರಹಿಂಸೆಗೆ ಬೇಸತ್ತ ತಾಯಿಯೊಬ್ಬಳು ತನ್ನ ಮೂರು ಮಕ್ಕಳೊಂದಿಗೆ ಕಾಲುವೆಗೆ ಹಾರಿರುವ ಘಟನೆ ನಾರಾಯಣಪುರ ಬಲದಂಡೆ ಬಳಿ ನಡೆದಿದೆ.

ದೂರು ದಾಖಲಾದ ಪ್ರತಿ

ನಾರಾಯಣಪುರ ಬಲದಂಡೆ ಕಾಲುವೆಗೆ ಮೂರು ಗಂಡು ಮಕ್ಕಳೊಂದಿಗೆ ತಾಯಿ ಜಿಗಿದು ಸಾವಿಗೆ ಶರಣಾಗಿದ್ದಾರೆ. ಜಿಲ್ಲೆಯ ದೇವದುರ್ಗ ತಾಲೂಕಿನ ಕೊತ್ತದೊಡ್ಡಿ ಗ್ರಾಮದ ಕಾಲುವೆಗಳಲ್ಲಿ ತಾಯಿ ಮತ್ತು ಮಕ್ಕಳ ಶವಗಳು ಪತ್ತೆಯಾಗಿವೆ.

ಮೃತರು ಸಿರವಾರ ತಾಲೂಕಿನ ಅತ್ತನೂರು ಗ್ರಾಮದ ನಸೀಮಾ‌(28), ಅನೀಫ್ (5), ಅಯ್ಯನ್ (3) ರಿದಾನ್ (1) ಎಂದು ಗುರುತಿಸಲಾಗಿದೆ.

ಸಿರವಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದೈಹಿಕ, ಮಾನಸಿಕ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Last Updated : Aug 21, 2019, 3:29 PM IST

ABOUT THE AUTHOR

...view details