ಕರ್ನಾಟಕ

karnataka

ETV Bharat / state

ಪಿಎಸ್ಐ ವಿರುದ್ಧ ಕಿರುಕುಳ ಆರೋಪ: ಡೆತ್​​ ನೋಟ್​ ಬರೆದು ನಾಪತ್ತೆಯಾಗಿದ್ದ ಯುವಕ ಪತ್ತೆ - ಈಟಿವಿ ಭಾರತ ಕರ್ನಾಟಕ

ಸಿರವಾರ ಪೊಲೀಸ್​ ಠಾಣೆ ಪಿಎಸ್ಐ ವಿರುದ್ಧ ಕಿರುಕುಳ ಆರೋಪ ಮಾಡಿ ಡೆತ್​ ನೋಟ್​ ಬರೆದಿಟ್ಟು ಕಾಣೆಯಾಗಿದ್ದ ಯುವಕ ಪತ್ತೆಯಾಗಿದ್ದಾನೆ.

kn_rcr_
ಡೆತ್​​ ನೋಟ್​ ಬರೆದು ನಾಪತ್ತೆಯಾಗಿದ್ದ ಯುವಕ ಪತ್ತೆ

By

Published : Dec 6, 2022, 7:47 PM IST

Updated : Dec 6, 2022, 8:14 PM IST

ರಾಯಚೂರು:ಮಹಿಳಾ ಪಿಎಸ್‌ಐ ವಿರುದ್ದ ಕಿರುಕುಳ ಆರೋಪ ಮಾಡಿ ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಯುವಕ ಬಳ್ಳಾರಿಯಲ್ಲಿ ಪತ್ತೆಯಾಗಿದ್ದಾನೆ.

ಜಿಲ್ಲೆಯ ಸಿರವಾರ ಪಟ್ಟಣದ ತಾಯಣ್ಣ ನಿಲೋಗಲ್ ಎನ್ನುವ ಯುವಕ ಸಿರವಾರ ಠಾಣೆ ಪಿಎಸ್​ಐ ಗೀತಾಂಜಲಿ ಶಿಂಧೆ ವಿರುದ್ಧ ಕಿರುಕುಳ ಆರೋಪ ಮಾಡಿ, ಡೆತ್ ನೋಟ್ ಬರೆದಿಟ್ಟು ಡಿಸೆಂಬರ್ 3 ರಂದು ಬೆಳಗಿನ ಜಾವ ನಾಪತ್ತೆಯಾಗಿದ್ದ. ಇದೀಗ ಬಳ್ಳಾರಿಯರಿಯಲ್ಲಿ ತಾಯಣ್ಣ ಪತ್ತೆಯಾಗಿದ್ದು, ಆತ್ಮಹತ್ಯೆ ನಿರ್ಧಾರ ಬದಲಾಯಿಸಿ ಪಿಎಸ್‌ಐ ವಿರುದ್ದ ಡಿಐಜಿಗೆ ದೂರು ನೀಡಲು ಬಳ್ಳಾರಿಗೆ ತೆರಳಿದ್ದ ಎನ್ನಲಾಗಿದೆ. ಬಳಿಕ ಪೊಲೀಸರು ತಾಯಣ್ಣನನ್ನು ಸಿರವಾರಕ್ಕೆ ವಾಪಸ್​ ಕರೆತಂದು, ಆತನಿಂದ ಮುಚ್ಚಳಿಕೆ ಪತ್ರ ಬರೆಯಿಸಿಕೊಂಡು ಮನೆಗೆ ಕಳುಹಿಸಿಕೊಟ್ಟಿದ್ದಾರೆ.

ಸಂಬಂಧಿಕರ ಜಮೀನಿನನಲ್ಲಿ ತಾಯಣ್ಣ ಭತ್ತ ಕಟಾವು ಮಾಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಪಿಎಸ್‌ಐ ಗೀತಾಂಜಲಿ ಮಧ್ಯೆ ಪ್ರವೇಶಿಸಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು. ತಾಯಣ್ಣ ನಾಪತ್ತೆ ಹಿನ್ನೆಲೆ ಸಿರವಾರ ಠಾಣೆಯಲ್ಲಿ ಪಿಎಸ್​ಐ ಗೀತಾಂಜಲಿ ಶಿಂಧೆ ವಿರುದ್ದ, ತಾಯಣ್ಣನ ಸಹೋದರ ಬಸವಲಿಂಗ ದೂರು ನೀಡಿದ್ದರು. ಸಿರವಾರ ಠಾಣೆಯಲ್ಲಿ ಪಿಎಸ್‌ಐ ವಿರುದ್ದ ಪ್ರಕರಣವೂ ದಾಖಲಾಗಿತ್ತು.

ಇದನ್ನೂ ಓದಿ:ಡೆತ್​ನೋಟ್ ಬರೆದಿಟ್ಟು ಯುವಕ ನಾಪತ್ತೆ.. ಸಿರವಾರ ಮಹಿಳಾ ಪಿಎಸ್​ಐ ವಿರುದ್ಧ ಎಫ್​ಐಆರ್​

Last Updated : Dec 6, 2022, 8:14 PM IST

ABOUT THE AUTHOR

...view details