ರಾಯಚೂರು :ಚಾಕುವಿನಿಂದ ಕತ್ತು ಕೊಯ್ದು ವ್ಯಕ್ತಿಯೋರ್ವನನ್ನು ಬರ್ಬರವಾಗಿ (Murder in Raichur) ಹತ್ಯೆಗೈದಿರುವ ಘಟನೆ ರಾಯಚೂರು ನಗರ ನಿಜಲಿಂಗಪ್ಪ ಕಾಲೋನಿಯಲ್ಲಿ ನಡೆದಿದೆ. ಪಂಪಾಪತಿ (77) ಎಂಬುವರು ಕೊಲೆಯಾದ ದುರ್ದೈವಿ. ಕೊಲೆಯಾದ ಪಂಪಾಪತಿ ನ್ಯಾಯಾಂಗ ಇಲಾಖೆಯ ನಿವೃತ್ತ ಶಿರಸ್ತೇದಾರ್ ಆಗಿದ್ದರು.
ರಾಯಚೂರಲ್ಲಿ ಹಾಡಹಗಲೇ ಹರಿದ ನೆತ್ತರು : ಚಾಕುವಿನಿಂದ ಕತ್ತು ಕೊಯ್ದು ಹತ್ಯೆ - ರಾಯಚೂರು ಕ್ರೈಂ ನ್ಯೂಸ್
ಹಾಡಹಗಲೇ ರಾಯಚೂರಲ್ಲಿ ವೃದ್ಧನ ಕತ್ತು ಸೀಳಿ (Murder in Raichur) ಹತ್ಯೆಗೈದ ಘಟನೆ ನಡೆದಿದೆ. ಸ್ಥಳೀಯರು ಆತಂಕಗೊಂಡಿದ್ದಾರೆ..

murder in Raichur
ದುಷ್ಕರ್ಮಿಗಳು ಹಣ ಒಡವೆ ಕಳ್ಳತನ ಮಾಡಿ ಬಳಿಕ ಕೊಲೆಗೈದು ಪರಾರಿಯಾಗಿದ್ದಾರೆ. ಕುಟುಂಬಸ್ಥರು ಸಂಬಂಧಿಕರ ಮದುವೆಗೆ ಹೋದಾಗ, ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ.
ಡಿವೈಎಸ್ಪಿ ಶಿವನಗೌಡ ಪಾಟೀಲ್ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾಡಹಗಲೇ ಈ ಘಟನೆ ನಡೆದಿದೆ. ಇದರಿಂದಾಗಿ ಬಡಾವಣೆ ನಿವಾಸಿಗಳು ಆತಂಕಗೊಂಡಿದ್ದಾರೆ.
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಚೂರು ಎಸ್ಪಿ ನಿಖಿಲ್ ಬಿ ಮಾಹಿತಿ ನೀಡಿರುವುದು..
Last Updated : Nov 21, 2021, 8:21 PM IST