ಕರ್ನಾಟಕ

karnataka

ETV Bharat / state

ರಾಯಚೂರು: ಪಾದಚಾರಿಗೆ ಬೊಲೆರೋ ಡಿಕ್ಕಿ, ವ್ಯಕ್ತಿ ಸಾವು - ರಾಯಚೂರು ಬೊಲೆರೋ ಡಿಕ್ಕಿ ಸುದ್ದಿ

ಪಾದಾಚಾರಿಗೆ ಬೊಲೆರೋ ವಾಹನ ಡಿಕ್ಕಿಯಾದ ಪರಿಣಾಮ ಆತ ಸಾವನ್ನಪ್ಪಿರುವ ಘಟನೆ ರಾಯಚೂರಿನ ಯರಗೇರಾದಲ್ಲಿ ನಡೆದಿದೆ.

raichuru
ಮೃತ ಮುನಿಸ್ವಾಮಿ

By

Published : Mar 4, 2021, 9:28 AM IST

ರಾಯಚೂರು:ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಬೊಲೆರೋ ವಾಹನ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಯರಗೇರಾ ಗ್ರಾಮದ ಕೆಇಬಿ ಬಳಿ ನಡೆದಿದೆ.

ಮುನಿಸ್ವಾಮಿ(35) ಮೃತ ವ್ಯಕ್ತಿ. ನಿನ್ನೆ ರಾತ್ರಿ 8 ಗಂಟೆಯ ಸುಮಾರಿಗೆ ಯರಗೇರಾ ಗ್ರಾಮದ ಮೂಲಕ ಕರ್ನೂಲ್‌ಗೆ ತೆರಳುವ ರಸ್ತೆಯಲ್ಲಿ ವ್ಯಕ್ತಿ ನಡೆದುಕೊಂಡು ಹೋಗುತ್ತಿದ್ದ. ಈ ವೇಳೆ ಬೊಲೆರೋ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದು, ತಕ್ಷಣವೇ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಈ ಘಟನೆ ಯರಗೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ.

ABOUT THE AUTHOR

...view details