ಕರ್ನಾಟಕ

karnataka

ETV Bharat / state

ಮಗ ಜೈಲು ಪಾಲಾಗಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ತಂದೆ - ರಾಯಚೂರು ಸುದ್ದಿ

ಕೊಲೆ ಪ್ರಕರಣದಲ್ಲಿ ಮಗ ಜೈಲು ಸೇರಿದ ಎಂದು ಮನನೊಂದು ತಂದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.

ಮಗ ಜೈಲು ಪಾಲಾಗಿದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ತಂದೆ
ಮಗ ಜೈಲು ಪಾಲಾಗಿದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ತಂದೆ

By

Published : Sep 1, 2020, 9:08 AM IST

ರಾಯಚೂರು: ಸೀಮೆಎಣ್ಣೆ ಸುರಿದುಕೊಂಡು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಜಿಲ್ಲೆಯ ದೇವದುರ್ಗ ತಾಲೂಕಿನ ಮಶಿಹಾಳ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ನಿಂಗಪ್ಪ ದಂಡಪ್ಪ(68) ಆತ್ಮಹತ್ಯೆ ಮಾಡಿಕೊಂಡವ. ಹಿರಿಯ ಮಗ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದು, ಈ ವಿಚಾರಕ್ಕೆ ನಿಂಗಪ್ಪ ಮದ್ಯಪಾನದ ದಾಸನಾಗಿದ್ದ ಎನ್ನಲಾಗಿದೆ. ಮಗನ ಈ ಸ್ಥಿತಿ ಕಂಡು ಮನನೊಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಘಟನೆ ಕುರಿತು ಗಬ್ಬೂರು ಪೊಲೀಸ್​ ಠಾಣೆಯಲ್ಲಿ ಕಲಂ-174 ಅನ್ವಯ ಯುಡಿಆರ್ ಅಡಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details