ರಾಯಚೂರು:ವಿದ್ಯುತ್ ಅವಘಡದಿಂದ ಗುತ್ತಿಗೆ ಕಾರ್ಮಿಕನೋರ್ವ ಮೃತಪಟ್ಟಿರುವ ಘಟನೆ ಶಕ್ತಿನಗರದ ಆರ್‌ಟಿಪಿಎಸ್ (ರಾಯಚೂರು ಬೃಹತ್ ಶಾಖೋತ್ಪನ್ನ ಕೇಂದ್ರ)ದಲ್ಲಿ ಇಂದು ಮಧ್ಯಾಹ್ನ ನಡೆದಿದೆ. ಯಾದಗಿರಿ ಜಿಲ್ಲೆಯ ಮೂಲದ ನಿಂಗಪ್ಪ ಸಂಗಪ್ಪ(45) ಮೃತ ಕಾರ್ಮಿಕ ಎಂದು ಗುರುತಿಸಲಾಗಿದೆ. ಮೃತ ನಿಂಗಪ್ಪ ಆರ್‌ಟಿಪಿಎಸ್‌ನ 5 ಮತ್ತು 6ನೇ ಘಟಕದ EE(AHP-2) ವಿಭಾಗದಲ್ಲಿ ಹೆಲ್ಪರ್ ಆಗಿ ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ಸೇರಿದ್ದರು. ಆದರೆ, ಇಂದು 4ನೇ ಯೂನಿಟ್ ಹತ್ತಿರ ವೆಲ್ಡಿಂಗ್ ಮಾಡುತ್ತಿದ್ದಾಗ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದಾನೆ ಎಂದು ಸ್ಥಳೀಯ ಕಾರ್ಮಿಕರು ಆರೋಪಿಸಿ, ಆರ್‌ಟಿಪಿಎಸ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಘಟನಾ ಸ್ಥಳಕ್ಕೆ ಶಕ್ತಿನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಯಲ್ಲಮ್ಮದೇವಿ ದರ್ಶನಕ್ಕೆ ಬಂದಿದ್ದ ಭಕ್ತ ಜೋಗುಳಬಾವಿಯಲ್ಲಿ ಮುಳುಗಿ ಸಾವು
ಬೆಳಗಾವಿ:ಪುಣ್ಯ ಸ್ನಾನಕ್ಕೆಂದು ಸವದತ್ತಿಯ ಜೋಗುಳಬಾವಿಯಲ್ಲಿ ಈಜಲು ಹೋಗಿ ನೀರು ಪಾಲಾಗಿದ್ದ ವ್ಯಕ್ತಿ ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ. ವಿನಾಯಕಸಿಂಗ್ ರಜಪೂತ(35)ಮೃತ ದುರ್ದೈವಿ. ವಿನಾಯಕಸಿಂಗ್ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಸಂಡ ಗ್ರಾಮದ ನಿವಾಸಿ. ಶ್ರಾವಣಮಾಸ ಹಿನ್ನಲೆ ಸವದತ್ತಿ ಯಲ್ಲಮ್ಮ ದೇವಿ ದರ್ಶನಕ್ಕೆ ವಿನಾಯಕಸಿಂಗ್ ಅವರ ಕುಟುಂಬ ಬಂದಿತ್ತು. ದೇವಾಲಯಗಳಿಗೆ ತೆರಳುವ ಮೊದಲು ಜೋಗುಳ ಬಾವಿಯಲ್ಲಿ ಸ್ನಾನ ಮಾಡುವುದು ವಾಡಿಕೆ.