ರಾಯಚೂರು: 20 ರೂಪಾಯಿ ಮುಖ ಬೆಲೆಯ ಹರಿದ ನೋಟಿನ ವಿಚಾರವಾಗಿ ಇಬ್ಬರ ಮಹಿಳೆಯರ ನಡುವೆ ಕೈ ಮಿಲಾಯಿಸುವ ಹಂತಕ್ಕೆ ಜಗಳ ತಿರುಗಿದೆ. ಪರಿಣಾಮ ಮಹಿಳೆಯೊಬ್ಬಳು ಸಾವಿಗೀಡಾಗಿರುವ ಘಟನೆ ಸಿಂಧನೂರು ತಾಲೂಕಿನ ಗೀತಾ ಕ್ಯಾಂಪ್ ನಲ್ಲಿ ನಡೆದಿದೆ.
ಗೀತಾ ಕ್ಯಾಂಪ್ನ ರುಕ್ಕಮ್ಮ, ಮಲ್ಲಮ್ಮ ಎಂಬ ಜಗಳ ಆಡಿದ ಮಹಿಳೆಯರಾಗಿದ್ದಾರೆ. ಈ ಇಬ್ಬರ ಜಗಳದಲ್ಲಿ ರುಕ್ಕಮ್ಮ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃ ತಪಟ್ಟಿದ್ದಾರೆ. ಇನ್ನೊಂದೆಡೆ, ತೀವ್ರವಾಗಿ ಗಾಯಗೊಂಡಿರುವ ಮಲ್ಲಮ್ಮಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ವಿವರ:ಗೀತಾಕ್ಯಾಂಪ್ನಲ್ಲಿ ಮಲ್ಲಮ್ಮ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ರುಕ್ಕಮ್ಮನ ಮಗಳು ಮಲ್ಲಮ್ಮನ ಅಂಗಡಿಗೆ ಹೋಗಿದ್ದರು. ಈ ವೇಳೆ ಮಲ್ಲಮ್ಮನಿಗೆ ಹರಿದ 20 ರೂ. ನೋಟು ನೀಡಿದ್ದಕಾರಣ, ರುಕ್ಕಮ್ಮ ನಡುವೆ ಮಾತಿಗೆ ಮಾತು ಬೆಳೆದು ಜಗಳ ತೀವ್ರ ಸ್ವರೂಪ ಪಡೆದುಕೊಂಡಿದೆ.