ರಾಯಚೂರು:ಜಿಲ್ಲೆಯ ದೇವದುರ್ಗ ತಾಲೂಕಿನ ಗೂಗಲ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹದಗೆಟ್ಟಿದ್ದು, ಮಳೆ ಬಂದಾಗ ಕೆಸರು ಗದ್ದೆಯಂತಾಗುತ್ತವೆ.
ಕೃಷ್ಣಾ ನದಿ ದಂಡೆಯ ಗೂಗಲ್ ಗ್ರಾಮದಲ್ಲಿ ಪ್ರಸಿದ್ಧ ಶ್ರೀ ಅಲ್ಲಮ ಪ್ರಭುಲಿಂಗೇಶ್ವರ ದೇವಸ್ಥಾನವಿದ್ದು, ಈ ರಸ್ತೆಯಲ್ಲಿ ದಿನಾಲು ಜನರು ಓಡಾಡುತ್ತಿರುತ್ತಾರೆ. ಆದರೆ ರಸ್ತೆಯ ಸಮಸ್ಯೆಯಿಂದಾಗಿ ಜನರಿಗೆ ತೊಂದರೆಯಾಗುತ್ತಿದ್ದು, ರಸ್ತೆ ಮಧ್ಯದಲ್ಲಿ ಬರುವ ಹಳ್ಳಗಳಿಗೆ ಸರಿಯಾಗಿ ಸೇತುವೆ ನಿರ್ಮಾಣವಿಲ್ಲದ ಕಾರಣ ವಾಹನ ಸವಾರರು ನರಕ ಯಾತನೆ ಅನುಭವಿಸುವಂತಾಗುತ್ತದೆ.