ರಾಯಚೂರು;ಜಿಲ್ಲೆಯ ಜೆಸ್ಕಾಂ ಜಾಗೃತದಳ ಪೊಲೀಸ್ ಠಾಣೆಯ ಕ್ರಿಮಿನಲ್ ಪ್ರಕರಣದಲ್ಲಿ ವಿದ್ಯುತ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದ ದಂಡವನ್ನು ಪಾವತಿಸದೇ ನಿರ್ಲಕ್ಷಿಸಿದ್ದಕ್ಕಾಗಿ ವ್ಯಕ್ತಿಯೊಬ್ಬನಿಗೆ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೈಲುಶಿಕ್ಷೆ ವಿಧಿಸಿದೆ.
ವಿದ್ಯುತ್ ಕಳ್ಳತನ ಪ್ರಕರಣ; ನ್ಯಾಯಾಲಯದಿಂದ ಆರೋಪಿಗೆ ಜೈಲುಶಿಕ್ಷೆ - ನ್ಯಾಯಾಂಗ ಬಂಧನ
ರಾಯಚೂರಿನ ಜೆಸ್ಕಾಂ ಜಾಗೃತದಳ ಪೊಲೀಸ್ ಠಾಣೆಯ ಕ್ರಿಮಿನಲ್ ಪ್ರಕರಣದಲ್ಲಿ ವಿದ್ಯುತ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದ ದಂಡವನ್ನು ಪಾವತಿಸದೇ ನಿರ್ಲಕ್ಷಿಸಿದ್ದಕ್ಕಾಗಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ವಿಶೇಷ ನ್ಯಾಯಾಲಯವು ಪ್ರಕರಣದ ಆರೋಪಿಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ.

ವಿದ್ಯುತ್ ಕಳ್ಳತನ ಪ್ರಕರಣ; ಆರೋಪಿಗೆ ಜೈಲುವಾಸ
ದೇವಸಗೂರಿನ ಜನತಾ ಕಾಲೋನಿಯ ವೆಂಕಟರಾವ್ ಎಂಬಾತನೇ ಶಿಕ್ಷೆಗೊಳಗಾದವರು. ವಿದ್ಯುತ್ ಕಳ್ಳತನದ ಆರೋಪದ ಮೇಲೆ ವಿಧಿಸಿದ್ದ ದಂಡವನ್ನು ಕಟ್ಟದಿದ್ದಕ್ಕೆ ಈತನಿಗೆ ಒಂದನೇ ಹೆಚ್ಚುವರಿ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶರು ಸೋಮವಾರ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ.
ವಿದ್ಯುತ್ ಕಳ್ಳತನ ಪ್ರಕರಣದಲ್ಲಿ ದಂಡ ಪಾವತಿಸದೇ ನಿರ್ಲಕ್ಷಿಸಿದಲ್ಲಿ ಮುಂದೆ ನಿಯಮ ಉಲ್ಲಂಘಿಸಿದವರಿಗೆ ಇದೇ ರೀತಿ ಶಿಕ್ಷೆ ನೀಡಲಾಗುವುದು ಎಂದು ಮೂಲಗಳಿಂದ ತಿಳಿದು ಬಂದಿದೆ.
Last Updated : Sep 10, 2019, 6:33 AM IST