ರಾಯಚೂರು: ನೀರಿನ ಸಂಪ್‌ನಲ್ಲಿ ಬಿದ್ದು ನಾಲ್ಕು ವರ್ಷ ಬಾಲಕ ಮೃತಪಟ್ಟಿರುವ ಘಟನೆ ನಗರದ ಹೊರವಲಯದ ಯರಮರಸ್ ಕ್ಯಾಂಪ್ ಬಳಿಯ ಪಾರಸ್ ವಾಟಿಕ ಬಡಾವಣೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ರಾಯಚೂರು: ನೀರಿನ ಸಂಪ್‌ನಲ್ಲಿ ಬಿದ್ದು ಬಾಲಕ ಸಾವು - ರಾಯಾಚೂರಿನಲ್ಲಿ ನೀರಿನ ಸಂಪ್ಗೆ ಬಿದ್ದು ಬಾಲಕ ಸಾವು
ಬಾಲಕ ನೀರಿನ ಸಂಪ್‌ನಲ್ಲಿ ಬಿದ್ದು ದಾರುಣವಾಗಿ ಸಾವನ್ನಪ್ಪಿದ ಘಟನೆ ರಾಯಾಚೂರಿನಲ್ಲಿ ನಡೆದಿದೆ.
ನೀರಿನ ಸಂಪ್‌ನಲ್ಲಿ ಬಿದ್ದು ಬಾಲಕ ಸಾವು
ಮದರಕಲ್ ಗ್ರಾಮದ ಲಕ್ಷಿ ಹಾಗೂ ಮೌನೇಶ್ ಪುತ್ರ ಗುರುಪ್ರಸಾದ್ ಮೃತ ಬಾಲಕ ಎಂದು ಗುರುತಿಸಲಾಗಿದೆ. ಬಡಾವಣೆಯ ಮನೆಯೊಂದರ ಮುಂದೆ ನೀರಿನ ಸಂಪ್ ಮುಚ್ಚಬೇಕಾಗಿತ್ತು. ಆದ್ರೆ ಮನೆಯ ಮಾಲೀಕ ಸಂಪ್ ಮುಚ್ಚಿದಿರುವ ಕಾರಣ ಬಾಲಕ ಸಂಪ್‌ನಲ್ಲಿ ಬಿದ್ದು ಸಾವಿಗೆ ಕಾರಣ ಎನ್ನಲಾಗುತ್ತಿದೆ.
ಇನ್ನೂ ಬಾಲಕನ ಸಾವಿನ ಕುರಿತು ಪೋಷಕರು ಅನುಮಾನ ವ್ಯಕ್ತಪಡಿಸಿದ್ದು ಆಕ್ರಂದನ ಮುಗಿಲು ಮುಟ್ಟಿತ್ತು. ಇನ್ನು ಈ ಸಂಬಂಧ ರಾಯಚೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.