ಕರ್ನಾಟಕ

karnataka

ETV Bharat / state

ರಾಯಚೂರಲ್ಲಿ ಮಹಾಮಾರಿ ಡೆಂಗ್ಯೂಗೆ ಬಾಲಕ ಬಲಿ - ರಾಯಚೂರು ಡೆಂಗ್ಯೂ ಸುದ್ದಿ

ಮಹಾಮಾರಿ ಡೆಂಗ್ಯೂ ರಾಯಚೂರಿನಲ್ಲಿ ಕಾಣಿಸಿಕೊಂಡಿದ್ದು, ಕೆಲವು ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಸ್ಕಿ ಪಟ್ಟಣದಲ್ಲಿ ಓರ್ವ ಬಾಲಕ ಈ ಮಹಾಮಾರಿಗೆ ಬಲಿಯಾಗಿದ್ದಾನೆ. ಇನ್ನು ಬಾಲಕನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪ ಕೇಳಿಬಂದಿದೆ.

ಡೆಂಗ್ಯುಗೆ ಬಾಲಕ ಬಲಿ

By

Published : Nov 13, 2019, 2:39 PM IST

ರಾಯಚೂರು: ಜಿಲ್ಲೆಯಲ್ಲಿ ಮಹಾಮಾರಿ ಡೆಂಗ್ಯೂ ಕಾಣಿಸಿಕೊಂಡಿದ್ದು, ಈ ಜ್ವರಕ್ಕೆ ಬಾಲಕನೋರ್ವ ಬಲಿಯಾಗಿದ್ದಾನೆ.

ಜಿಲ್ಲೆಯ ಮಸ್ಕಿ ಪಟ್ಟಣದ ಶಿವರಾಜ್(4) ಡೆಂಗ್ಯೂ ಜ್ವರಕ್ಕೆ ಬಲಿಯಾದ ಬಾಲಕ. ಪಟ್ಟಣದಲ್ಲಿ 6 ಮಕ್ಕಳಲ್ಲಿ‌ ಡೆಂಗ್ಯೂ ಕಾಣಿಸಿಕೊಂಡಿದ್ದು, ಸದ್ಯ ಬಳ್ಳಾರಿಯ ಸರ್ಕಾರಿ ಆಸ್ಪತ್ರೆಯಲ್ಲಿ‌ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನು ಬಾಲಕನ‌ ಸಾವಿಗೆ ಮಸ್ಕಿ ಸರ್ಕಾರಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪ ಕೇಳಿಬಂದಿದೆ. ಆದರೆ ಪಟ್ಟಣದಲ್ಲಿ ಡೆಂಗ್ಯೂ ಕಾಣಿಸಿಕೊಂಡರೂ ನಮಗೆ ಮಾಹಿತಿ ಇಲ್ಲ. ಜನ ಹೇಳುತ್ತಾರೆ, ಅದನ್ನು ಕೇಳಿದ್ದೇವೆ ಎಂದು ವೈದ್ಯರು ಹೇಳುತ್ತಾರೆ.

ABOUT THE AUTHOR

...view details