ರಾಯಚೂರು: ಮನೆಯಲ್ಲಿ ಮಲಗಿದ್ದ ಬಾಲಕನಿಗೆ ಹಾವು ಕಚ್ಚಿದ ಪರಿಣಾಮ ಬಾಲಕ ಮೃತಪಟ್ಟಿರುವ ಘಟನೆ ಜಿಲ್ಲೆಯ ಸಿಂಧನೂರು ತಾಲೂಕಿನ ದೇವಿ ಕ್ಯಾಂಪ್‌ನಲ್ಲಿ ಸಂಭವಿಸಿದೆ.
ರಾಯಚೂರು: ಮಲಗಿದ್ದ ವೇಳೆ ಹಾವು ಕಚ್ಚಿ 7 ವರ್ಷದ ಬಾಲಕ ಸಾವು - ರಾಯಚೂರು 7 ವರ್ಷದ ಬಾಲಕ ಸಾವು ನ್ಯೂಸ್
7 ವರ್ಷದ ಬಾಲಕನಿಗೆ ಹಾವು ಕಚ್ಚಿದ ಪರಿಣಾಮ ಬಾಲಕ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ದೇವಿ ಕ್ಯಾಂಪ್‌ನಲ್ಲಿನಲ್ಲಿ ನಡೆದಿದೆ.
ಹಾವು ಕಚ್ಚಿ ಬಾಲಕ ಸಾವು
ರಾಜೇಶ್ ನಾಯಕ (7) ಮೃತ ಬಾಲಕ. ಬಾಲಕ ರಾತ್ರಿ ತಮ್ಮ ಪೋಷಕರೊಂದಿಗೆ ಊಟ ಮಾಡಿ ಮಲಗಿದ್ದಾನೆ. ಆದ್ರೆ ಬೆಳಂಬೆಳಗ್ಗೆ ಹಾವು ಕಚ್ಚಿದ್ದು, ಅಸ್ವಸ್ಥಗೊಂಡಿದ್ದಾನೆ. ಕೂಡಲೇ ಸ್ಥಳೀಯ ಸಿಂಧನೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಲಾಗಿದೆ. ಅಲ್ಲಿಂದ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ರಿಮ್ಸ್ ಆಸ್ಪತ್ರೆಗೆ ಚಿಕಿತ್ಸೆ ರವಾನಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದ ಪರಿಣಾಮ ಬಾಲಕ ಮೃತಪಟ್ಟಿದ್ದಾನೆ.
ಈ ಸಂಬಂಧ ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.