ರಾಯಚೂರು :97 ವರ್ಷದ ವೃದ್ದೆ ಕೊರೊನಾ ಗೆಲ್ಲುವ ಮೂಲಕ ಗುಣಮುಖರಾಗಿದ್ದಾರೆ. ನಗರದ ಮಹಾವೀರ ಚೌಕ್ ಪ್ರದೇಶದ ವೃದ್ದೆ ಸಜನಿಬಾಯಿ ಜೈನ್ ಎಂಬ ಅಜ್ಜಿ ಗುಣಮುಖರಾದವರು.
ಕೊರೊನಾ ಗೆದ್ದ 97 ವರ್ಷದ ಅಜ್ಜಿ.. ಈ ಜೀವದ ಆತ್ಮಸ್ಥೈರ್ಯ ನಮಗೆಲ್ಲ ಸ್ಫೂರ್ತಿ.. - ಕೊರೊನಾ ಗೆದ್ದ ಅಜ್ಜಿ
ಧೈರ್ಯ ಹಾಗೂ ಆತ್ಮಸ್ಥೈರ್ಯದಿಂದ ಎದುರಿಸಿದರೆ ಎಂತಹ ರೋಗವೂ ಗುಣಮುಖವಾಗಬಲ್ಲದು ಎನ್ನುವುದಕ್ಕೆ ಅಜ್ಜಿ ಪ್ರೇರಣೆಯಾಗಿದ್ದಾರೆ..

97-years-old-woman-recovers-from-corona
ಏಪ್ರಿಲ್ 21ರಂದು ಕೊರೊನಾಕ್ಕೆ ತುತ್ತಾಗಿ ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಪಡೆದು ನಿನ್ನೆ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ವೃದ್ದೆಯ ಮನೆಯಲ್ಲಿ ಕೊರೊನಾ ಬಂದಿದೆ ಎಂದು ಕುಟುಂಬಸ್ಥರು ಗಾಬರಿಗೊಂಡಿದ್ದರು.
ಆದ್ರೆ, ಧೈರ್ಯ ಹಾಗೂ ಆತ್ಮಸ್ಥೈರ್ಯದಿಂದ ಎದುರಿಸಿದರೆ ಎಂತಹ ರೋಗವೂ ಗುಣಮುಖವಾಗಬಲ್ಲದು ಎನ್ನುವುದಕ್ಕೆ ಅಜ್ಜಿ ಪ್ರೇರಣೆಯಾಗಿದ್ದಾರೆ. ಕೊರೊನಾಗೆ ಭಯ ಪಡುವುದು ಬೇಡ ಎಂಬ ಪ್ರಕಟಣೆಯನ್ನ ಆಸ್ಪತ್ರೆ ನೀಡಿದೆ.