ಕರ್ನಾಟಕ

karnataka

ETV Bharat / state

ರಾಯಚೂರು; 93 ಮಂದಿಗೆ ಸೋಂಕು ದೃಢ, ಓರ್ವ ಬಲಿ

93 ಮಂದಿಗೆ ಸೋಂಕು ದೃಢಪಡುವ ಮೂಲಕ ಸೋಂಕಿತರ ಸಂಖ್ಯೆ 1,914ಕ್ಕೆ ತಲುಪಿದೆ ಮತ್ತು ಓರ್ವ ವ್ಯಕ್ತಿ ಸೋಂಕಿಗೆ ಬಲಿಯಾಗಿದ್ದಾರೆ. ಸದ್ಯ ಒಪೆಕ್ ನಲ್ಲಿ 84 ಮಂದಿಗೆ ಹಾಗು ಕೋವಿಡ್ ಕೇರ್ ಸೆಂಟರ್ ನಲ್ಲಿ 673 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

Raichur corona case
Raichur corona case

By

Published : Jul 28, 2020, 11:57 PM IST

ರಾಯಚೂರು: ಹೊಸದಾಗಿ 93 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 1914ಕ್ಕೆ ತಲುಪಿದೆ. ಮತ್ತು ಓರ್ವ ಸೋಂಕಿತ ಸಾವನಪ್ಪಿದ್ದಾರೆ.

ರಾಯಚೂರು ತಾಲೂಕಿನಲ್ಲಿ 59, ಮಾನವಿಯಲ್ಲಿ 9, ದೇವದುರ್ಗದಲ್ಲಿ 7, ಲಿಂಗಸೂಗೂರಿನಲ್ಲಿ 10, ಸಿಂಧನೂರು ತಾಲೂಕಿನ 8 ಪ್ರಕರಣಗಳು ಇಂದು ದೃಢಪಟ್ಟಿದೆ. ಈವರೆಗೆ ಪತ್ತೆಯಾಗಿರುವ ಸೋಂಕಿತರ ಪೈಕಿ 1136 ಜನರು ಸೋಂಕಿನಿಂದ ಗುಣಮುಖ ಹೊಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನುಳಿದ 757 ಸಕ್ರಿಯ ಪ್ರಕರಣಗಳಿಗೆ ಒಪೆಕ್ ನಲ್ಲಿ 84 ಜನ, ಕೋವಿಡ್ ಕೇರ್ ಸೆಂಟರ್ ನಲ್ಲಿ 673 ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಓರ್ವ ವ್ಯಕ್ತಿ ಸೋಂಕಿನಿಂದ ಸಾವಿಗೀಡಾಗುವ ಮೂಲಕ ಸಾವಿನ ಸಂಖ್ಯೆ 21ಕ್ಕೆ ಏರಿಕೆಯಾಗಿದೆ. ಸದ್ಯ ಪತ್ತೆಯಾಗಿರುವ ಸೋಂಕಿತರ ಪ್ರಾಥಮಿಕ, ದ್ವಿತೀಯ ಸಂಪರ್ಕಗಳನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

ABOUT THE AUTHOR

...view details