ಸೇಡಂ:ತಾಲೂಕಿನಲ್ಲಿ ಸುರಿದ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದ್ದು, ರಾಜೀವ್ನಗರ, ಕುಕ್ಕುಂದ, ಅರೆಬೊಮ್ನಳ್ಳಿ, ಬಟಗೇರಾ (ಕೆ), ಬಟಗೇರಾದಲ್ಲಿ (ಬಿ) ಸೇರಿದಂತೆ ಕೆಲವೆಡೆ 9 ಮನೆಗಳು ನೆಲಕ್ಕುರುಳಿವೆ.
ಸೇಡಂ: ಧಾರಾಕಾರ ಮಳೆಗೆ ನೆಲಕ್ಕುರುಳಿದ 9 ಮನೆಗಳು - ರಾಯಚೂರು ಜಿಲ್ಲಾ ಸುದ್ದಿ
ಸೇಡಂನಲ್ಲಿ ಸುರಿದ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ತಾಲೂಕಿನಲ್ಲಿ ಒಟ್ಟು 9 ಮನೆಗಳು ಕುಸಿದಿವೆ.
ನೆಲಕ್ಕುರುಳಿದ ಮನೆ
ಹಲವು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದ್ದು, ಮನೆಯಲ್ಲಿದ್ದ ಧವಸ ಧಾನ್ಯಗಳು ನೀರುಪಾಲಾದವು. ತಹಶೀಲ್ದಾರ್ ಬಸವರಾಜ್ ಬೆಣ್ಣೆಶಿರೂರ ಅವರು ಸ್ಥಳ ಪರಿಶೀಲನೆ ನಡೆಸಿದರು.
ಜಿಲ್ಲಾಧಿಕಾರಿಗಳು ಮತ್ತು ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಅವರು ಜನರಿಗಾದ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಸಂಬಂಧ ಶೀಘ್ರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ತಹಶೀಲ್ದಾರರು ಭರವಸೆ ನೀಡಿದರು.