ರಾಯಚೂರು: ದೇಶದಲ್ಲಿ ರೈಲು ಸಂಚಾರ ಆರಂಭವಾದ ಹಿನ್ನೆಲೆ ರಾಯಚೂರು ಜಿಲ್ಲೆಗೆ ಉದ್ಯಾನ್ ಎಕ್ಸ್ಪ್ರೆಸ್ ಹಾಗೂ ತಿರುಪತಿ-ನಿಜಾಮುದ್ದೀನ್ ರೈಲುಗಳು ಆಗಮಿಸಿವೆ.
ಎರಡು ರೈಲುಗಳಲ್ಲಿ ರಾಯಚೂರಿಗೆ 70 ಜನರ ಆಗಮನ... ಸ್ಟೇಷನ್ನಲ್ಲೇ ಆರೋಗ್ಯ ತಪಾಸಣೆ - ರಾಯಚೂರಿಗೆ ರೈಲು ಮೂಲಕ ವಲಸಿಗರು ಆಗಮನ
ರೈಲು ಸಂಚಾರ ಆರಂಭವಾದ ಹಿನ್ನೆಲೆ ರಾಯಚೂರು ಜಿಲ್ಲೆಗೆ 2 ರೈಲುಗಳಲ್ಲಿ ಸುಮಾರು 70 ಜನರು ಆಗಮಿಸಿದ್ದಾರೆ. ಅವರಿಗೆ ಆರೋಗ್ಯ ತಪಾಸಣೆ ಮಾಡಲಾಗಿದೆ.
ಎರಡು ರೈಲುಗಳಲ್ಲಿ ಮುಂಬೈನಿಂದ 24 ಜನ, ಆಂಧ್ರ ಪ್ರದೇಶದಿಂದ 46 ಜನ ಆಗಮಿಸಿದ್ದಾರೆ. ರೈಲಿನಿಂದ ಆಗಮಿಸಿದವರ ಆರೋಗ್ಯ ತಪಾಸಣೆ ಮಾಡಲಾಯಿತು. ಮುಂಬೈನಿಂದ ಆಗಮಿಸಿದವರನ್ನ ಸಾಂಸ್ಥಿಕ ಕ್ವಾರಂಟೈನ್ಗೆ ರವಾನಿಸಲಾಯಿತು. ಆಂಧ್ರ ಪ್ರದೇಶದಿಂದ ಆಗಮಿಸಿದವರಿಗೆ 14 ದಿನಗಳ ಕಾಲ ಹೋಮ್ ಕ್ವಾರಂಟೈನ್ ಮಾಡಲಾಯಿತು.
ರೈಲ್ವೆ ಸಂಚಾರ ಆರಂಭಕ್ಕೂ ಮುನ್ನ ಜಿಲ್ಲಾಡಳಿತ ಸಭೆ ನಡೆಸುವ ಮೂಲಕ ಅಗತ್ಯ ಸಿದ್ಧತೆ ಮಾಡಿಕೊಂಡಿತ್ತು. ರೈಲುಗಳಲ್ಲಿ ಆಗಮಿಸಿದ ಜನರನ್ನ ಬರಮಾಡಿಕೊಳ್ಳಲಾಯಿತು. ಈ ವೇಳೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ, ಪೊಲೀಸ್ ಇಲಾಖೆಯ ಅಧಿಕಾರಿಗಳು, ರೈಲ್ವೆ ಇಲಾಖೆಯ ಅಧಿಕಾರಿಗಳು ಸೇರಿದಂತೆ ಇತರರು ಇದ್ದರು.