ಕರ್ನಾಟಕ

karnataka

ETV Bharat / state

ಬಟ್ಟೆ ತೊಳೆಯಲು ಹೋಗಿ ಮಗನನ್ನೇ ಕಳೆದುಕೊಂಡ ತಾಯಿ ಆಕ್ರಂದನ - ನಾರಾಯಣಪುರ ಬಲದಂಡೆ ಮುಖ್ಯ ನಾಲೆ

ತಾಯಿಯೊಂದಿಗೆ ಬಟ್ಟೆ ತೊಳೆಯಲು ಹೋದ ಸಂದರ್ಭದಲ್ಲಿ ಆರು ವರ್ಷದ ಮಗ ಕಾಲು ಜಾರಿ ನಾಲೆಗೆ ಬಿದ್ದಿದ್ದು, ಈವರೆಗೆ ಆತನ ಪತ್ತೆಯಾಗಿಲ್ಲ.

Lingasuguru
ಬಟ್ಟೆ ತೊಳೆಯಲು ಹೋಗಿ ಮಗನನ್ನೆ ಕಳೆದುಕೊಂಡ ತಾಯಿ ಆಕ್ರಂದನ

By

Published : Dec 31, 2020, 5:21 PM IST

ಲಿಂಗಸುಗೂರು: ನಾರಾಯಣಪುರ ಬಲದಂಡೆ ಮುಖ್ಯ ನಾಲೆಯ 20ನೇ ಕಿಲೋ ಮೀಟರ್ ದೂರದಲ್ಲಿ ಬಾಲಕನೊಬ್ಬ ಕಾಲು ಜಾರಿ ಬಿದ್ದಿದ್ದು, ಬಾಲಕನಿಗಾಗಿ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ.

ಬುಧವಾರ ಲಿಂಗಸುಗೂರು ತಾಲೂಕು ಕಾಳಾಪುರ ಬಳಿ ತಾಯಿ ಚಂದ್ರಮ್ಮಳೊಂದಿಗೆ ಬಟ್ಟೆ ತೊಳೆಯಲು ಹೋದ ಸಂದರ್ಭದಲ್ಲಿ ಮಗ ಬಸವರಾಜ (6) ಕಾಲು ಜಾರಿ ಬಿದ್ದಿದ್ದು, ತಡವಾಗಿ ಗುರುವಾರ ಬೆಳಕಿಗೆ ಬಂದಿದೆ.

ಬೆಳಗ್ಗೆ ಪೊಲೀಸ್ ಠಾಣೆಗೆ ಮಾಹಿತಿ ನೀಡುತ್ತಿದ್ದಂತೆ ಪಿಎಸ್ಐ ಪ್ರಕಾಶರೆಡ್ಡಿ ಡಂಬಳ, ಅಗ್ನಿಶಾಮಕ ದಳ ಠಾಣಾಧಿಕಾರಿ ಹೊನ್ನಪ್ಪ ಸಿಬ್ಬಂದಿ ಸಮೇತ ಸ್ಥಳಕ್ಕೆ ಭೇಟಿ ನೀಡಿದ್ದು, ಅಂದಾಜು 20 ಕಿಲೋಮೀಟರ್​ನಷ್ಟು ದೂರ ಹುಡುಕಾಟ ನಡೆಸಿದ್ದಾರೆ. ಸದ್ಯ ಬಾಲಕ ಪತ್ತೆಯಾಗಿಲ್ಲ ಎಂದು ಮೂಲಗಳು ದೃಢಪಡಿಸಿವೆ.

ABOUT THE AUTHOR

...view details