ಕರ್ನಾಟಕ

karnataka

ETV Bharat / state

ರಾಯಚೂರು: ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ 6 ನಾಮಪತ್ರ ಸಲ್ಲಿಕೆ - raichur muncipal presidence and vice presidence election

ರಾಯಚೂರು ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆಗೆ 6 ನಾಮಪತ್ರಗಳು ಸಲ್ಲಿಕೆಯಾಗಿವೆ. ಇಂದು ಸಂಜೆ ವೇಳೆ ನಗರಸಭೆಗೆ ಯಾರು ಸಾರಥಿ ಅನ್ನೋದು ತಿಳಿಯಲಿದೆ.

nomination papers submits
ನಾಮಪತ್ರ ಸಲ್ಲಿಕೆ

By

Published : Nov 2, 2020, 12:05 PM IST

ರಾಯಚೂರು: ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ 6 ಜನರು ನಾಮಪತ್ರ ಸಲ್ಲಿಸಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಿಂದ ವಿನಯಕುಮಾರ್ ಎರಡು ನಾಮಪತ್ರ, ಸಾಜೀದ್ ಸಮೀರ್ ಒಂದು ನಾಮಪತ್ರ ಸಲ್ಲಿಸಿದ್ದಾರೆ.

ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಉಮಾ ಜಲ್ದಾರ್ ಎರಡು ನಾಮ ಪತ್ರ ಸಲ್ಲಿಸಿದ್ದು, ಕಾಂಗ್ರೆಸ್ ನಿಂದ ನರಸಮ್ಮ ಮಾಡಗಿರಿ ಒಂದು ನಾಮಪತ್ರ ಸಲ್ಲಿಸಿದ್ದಾರೆ.

ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಯಾರೂ ನಾಮಪತ್ರ ಸಲ್ಲಿಸಿಲ್ಲ. ಕಾಂಗ್ರೆಸ್ ನಿಂದಲೇ ಇಬ್ಬರು ನಾಮಪತ್ರ ಸಲ್ಲಿಸಿದ್ದು, ಯಾರು ಗದ್ದುಗೆ ಏರುತ್ತಾರೆ ಎನ್ನುವ ಕುರಿತು ಕುತೂಹಲ ಮೂಡಿದೆ.

ABOUT THE AUTHOR

...view details