ರಾಯಚೂರು:ಇಂದು ಜಿಲ್ಲೆಯಲ್ಲಿ 6 ಕೊರೊನಾ ಪಾಸಿಟಿವ್ ಪ್ರಕರಣ ದೃಢಪಟ್ಟಿವೆ. ಈ ಮೂಲಕ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ 517ಕ್ಕೆ ಏರಿಕೆಯಾಗಿದೆ.
ರಾಯಚೂರಲ್ಲಿ ಮತ್ತೆ ಆರು ಜನರಲ್ಲಿ ಕೊರೊನಾ ಸೋಂಕು ಪತ್ತೆ! - Raichur Corona Death
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಬಿಸಿಲನಾಡು ರಾಯಚೂರಲ್ಲಿ ಇಂದೂ ಸಹ 6 ಪ್ರಕರಣಗಳು ದಾಖಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 500ರ ಗಡಿದಾಟಿದ್ದು, 517ಕ್ಕೆ ಏರಿಕೆಯಾಗಿದೆ.
ರಾಯಚೂರಲ್ಲಿ ಮತ್ತೆ ಆರು ಜನರಲ್ಲಿ ಕೊರೊನಾ ಸೋಂಕು ಪತ್ತೆ
ಇಂದು 6 ಪ್ರಕರಣಗಳಲ್ಲಿ ರಾಯಚೂರಿನಲ್ಲಿ ಒಬ್ಬರಿಗೆ, ಮಾನವಿಯಲ್ಲಿ ಮೂವರಿಗೆ ಹಾಗೂ ಸಿಂಧನೂರು ತಾಲೂಕಿನಲ್ಲಿ ಇಬ್ಬರಿಗೆ ಸೋಂಕು ದೃಢಪಟ್ಟಿದೆ. ಈವರೆಗೆ ರಾಯಚೂರು ತಾಲೂಕಿನಲ್ಲಿ 111 ಜನರಿಗೆ, ಮಾನ್ವಿ ತಾಲೂಕಿನಲ್ಲಿ 21 ಜನರಿಗೆ ಹಾಗೂ ಸಿಂಧನೂರು ತಾಲೂಕಿನಲ್ಲಿ 16 ಜನರಿಗೆ ಸೋಂಕು ತಗುಲಿದೆ.
517 ಮಂದಿ ಸೋಂಕಿತರಲ್ಲಿ 404 ಸೋಂಕಿತರು ಗುಣಮುಖವಾಗಿ ಬಿಡುಗಡೆಯಾಗಿದ್ದು, ಇನ್ನುಳಿದಂತೆ 108 ಸಕ್ರೀಯ ಪ್ರಕರಣಗಳಿವೆ. ಇಂದು ದಾಖಲಾದ 6 ಮಂದಿ ಸೋಂಕಿತರನ್ನು ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.