ಕರ್ನಾಟಕ

karnataka

ETV Bharat / state

ನಾರಾಯಣಪುರ ಡ್ಯಾಂನಿಂದ ಕೃಷ್ಣಾ ನದಿಗೆ 45970 ಕ್ಯೂಸೆಕ್ ನೀರು ಬಿಡುಗಡೆ - ಲಿಂಗಸೂಗೂರು ಲೆಟೆಸ್ಟ್ ನ್ಯೂಸ್‌

ನಾರಾಯಣಪುರ ಅಣೆಕಟ್ಟೆಯಿಂದ ಕೃಷ್ಣಾ ನದಿಗೆ 45970 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.

ಲಿಂಗಸುಗೂರು
ಲಿಂಗಸುಗೂರು

By

Published : Jul 18, 2020, 10:20 AM IST

ಲಿಂಗಸೂಗೂರು(ರಾಯಚೂರು):ನಾರಾಯಣಪುರ ಅಣೆಕಟ್ಟೆಯಿಂದ ಕೃಷ್ಣಾ ನದಿಗೆ 45,970 ಕ್ಯೂಸೆಕ್ ನೀರು ಹರಿಬಿಡಲಾಗಿದೆ ಎಂದು ಅಣೆಕಟ್ಟೆ ಕಿರಿಯ ಇಂಜಿನಿಯರ್‌ ವಿಜಯಕುಮಾರ್ ಅರಳಿ ತಿಳಿಸಿದ್ದಾರೆ.

ಇಂದು ಬೆಳಗ್ಗೆ ಅಣೆಕಟ್ಟಿನ ನೀರಿನ ಮಟ್ಟ 492.252 ಮೀಟರ್ ಪೈಕಿ 491.620 ಮೀಟರ್ ಮಟ್ಟ ಕಾಪಾಡಿಕೊಂಡು 7 ಕ್ರಸ್ಟ್​​​ಗೇಟ್​​ಗಳ ಮೂಲಕ ಕೃಷ್ಣಾ ನದಿಗೆ ನೀರು ಬಿಡಲಾಗಿದೆ ಎಂದರು.

ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದ ಮಳೆ ಬರುತ್ತಿದ್ದು, ಆಲಮಟ್ಟಿ ಜಲಾಶಯದಿಂದ 40,000 ಕ್ಯೂಸೆಕ್ ನೀರು ಹರಿ ಬಿಡಲಾಗಿದೆ. ಹಂತ ಹಂತವಾಗಿ ಒಳ ಹರಿವು ಆಧರಿಸಿ ಕೃಷ್ಣಾ ನದಿಗೆ ಬಿಡುವ ನೀರಿನ ಪ್ರಮಾಣ ಹೆಚ್ಚು ಕಡಿಮೆ ಆಗಲಿದೆ ಎಂದು ಇಂಜಿನಿಯರ್​ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details