ಕರ್ನಾಟಕ

karnataka

ETV Bharat / state

ಕಲ್ಲಿದ್ದಲು ಕೊರತೆ: ಆರ್‌ಟಿಪಿಎಸ್​ನ 8 ಘಟಕಗಳಲ್ಲಿ 4 ಸ್ಥಗಿತ!

ಕಲ್ಲಿದ್ದಲು ಕೊರತೆಯಿಂದಾಗಿ ರಾಯಚೂರು ಆರ್‌ಟಿಪಿಎಸ್​ನ 8 ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ 4 ವಿದ್ಯುತ್ ಉತ್ಪಾದನಾ ಘಟಕಗಳು ಸ್ಥಗಿತಗೊಂಡಿವೆ.

4  power generation units of RTPS was stopped
ಆರ್‌ಟಿಪಿಎಸ್​ನ 4 ವಿದ್ಯುತ್ ಉತ್ಪಾದನಾ ಘಟಕಗಳು ಸ್ಥಗಿತ

By

Published : Oct 7, 2021, 3:34 PM IST

ರಾಯಚೂರು: ರಾಜ್ಯಕ್ಕೆ ವಿದ್ಯುತ್ ಲೋಡ್ ಶೆಡ್ಡಿಂಗ್ ಎದುರಾಗುವ ಸಾಧ್ಯತೆಯಿದೆ. ಆರ್‌ಟಿಪಿಎಸ್ (ರಾಯಚೂರು ವಿದ್ಯುತ್​​ ಶಾಖೋತ್ಪನ್ನ ಕೇಂದ್ರ)ನ ನಾಲ್ಕು ವಿದ್ಯುತ್ ಉತ್ಪಾದನಾ ಘಟಕಗಳು ಸ್ಥಗಿತಗೊಂಡಿವೆ. ಒಟ್ಟು 8 ಘಟಕಗಳಿಂದ 1,720 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿದ್ದು, ಕಲ್ಲಿದ್ದಲ್ಲು ಸಮಸ್ಯೆಯಿಂದಾಗಿ 1, 3, 7, 8ನೇ ಘಟಕಗಳು ಸ್ಥಗಿತಗೊಂಡಿವೆ. ಇನ್ನುಳಿದ 2, 4, 5, 6ನೇ ಘಟಕಗಳಿಂದ 630 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ.

ಆರ್‌ಟಿಪಿಎಸ್ ‌ನಲ್ಲಿರುವ 8 ವಿದ್ಯುತ್ ಘಟಕಗಳು ವಿದ್ಯುತ್ ಉತ್ಪಾದನೆ ಮಾಡಬೇಕಾದರೆ 25 ಸಾವಿರ ಮೆಟ್ರಿಕ್ ಟನ್ ಕಲ್ಲಿದ್ದಲು ಬೇಕಾಗುತ್ತದೆ. ಆದರೆ ಕಲ್ಲಿದ್ದಲ್ಲು ಘಟಕದಿಂದ ಬೇಡಿಕೆಯಂತೆ ಪೂರೈಕೆಯಾಗದೇ ಮಹಾರಾಷ್ಟ್ರ ಸಿಂಗರೇಣಿಯ ಕೂಲ್ ಮೈನಿಂಗ್‌ನಿಂದ ಎರಡು ರೇಕ್(3,200ರಿಂದ 3,600 ಟನ್), ನಾಗಪುರದಿಂದ ಒಂದು ರೇಕ್ ಸೇರಿದಂತೆ 3-4 ರೇಕ್‌ಗಳು ಸರಬರಾಜು ಆಗುತ್ತಿದ್ದು, ಇದರಿಂದ 4 ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ.

ಇನ್ನುಳಿದ‌ ಘಟಕಗಳು ಕಾರ್ಯ ನಿರ್ವಹಿಸಲು ಕಲ್ಲಿದ್ದಲ್ಲು ಸಮಸ್ಯೆ ತಲೆ ದೂರಿದೆ. ಒಂದು ವೇಳೆ ಈ ಪೂರೈಕೆಯೂ ಸ್ಥಗಿತವಾದರೆ ವಿದ್ಯುತ್ ಉತ್ಪಾದನೆ ಕಡಿಮೆಯಾಗಿ ವಿದ್ಯುತ್ ಲೋಡ್‌ಶೆಡ್ಡಿಂಗ್ ಸಮಸ್ಯೆ ಎದುರಿಸಬೇಕಾಗುತ್ತದೆ. ಇನ್ನೂ ಸೌರ ಹಾಗೂ ಪವನ ವಿದ್ಯುತ್ ಶಕ್ತಿಯಿಂದ ವಿದ್ಯುತ್ ಉತ್ಪಾದನೆಯಾಗುತ್ತಿತ್ತು. ಆದರೆ ಹವಾಮಾನದಲ್ಲಿನ ಬದಲಾವಣೆಯಿಂದಾಗಿ ನಿರೀಕ್ಷೆಯಂತೆ ವಿದ್ಯುತ್ ಉತ್ಪಾದನೆಯಾಗುತ್ತಿಲ್ಲ.

ಇದನ್ನೂ ಓದಿ:ಬಾಗಲಕೋಟೆಯಲ್ಲಿ ಕಾಂಟ್ರಾಕ್ಟರ್​ಗೆ ಐಟಿ ಶಾಕ್​.. ಡಿ.ವೈ. ಉಪ್ಪಾರ ಮನೆ ಮೇಲೆ ಅಧಿಕಾರಿಗಳ ದಾಳಿ

ಆರ್‌ಟಿಪಿಎಸ್ ನ 8 ಘಟಕಗಳಲ್ಲಿ, 4 ಘಟಕಗಳಿಂದ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಇನ್ನುಳಿದ ಘಟಕಗಳಿಗೆ ಬೇಕಾಗುವ ಕಲ್ಲಿದ್ದಲ್ಲು ಪೂರೈಕೆಯಾಗಿಲ್ಲ. ಕಲ್ಲಿದ್ದಲಿನ ಸಮಸ್ಯೆಯಿಂದ 4 ಘಟಕಗಳನ್ನು ಬಂದ್ ಮಾಡಲಾಗಿದೆ. ಈಗ ಮೂರ್ನಾಲ್ಕು ರೇಕ್ ‌ಗಳ ಕಲ್ಲಿದ್ದಲು ಬರುತ್ತಿದೆ. ಅದರಲ್ಲಿ 4 ಘಟಕಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಆರ್‌ಟಿಪಿಎಸ್ ಇಡಿ ವೆಂಕಟಾಚಾಲಪತಿ ಹೇಳಿದ್ದಾರೆ.

ABOUT THE AUTHOR

...view details