ರಾಯಚೂರು: ಬಿಸಿಲೂರು ರಾಯಚೂರಲ್ಲಿ ಇಂದು ನಾಲ್ವರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. 12 ವರ್ಷದ ಬಾಲಕಿ ಹಾಗೂ ಮೂವರು ಮಹಿಳೆಯರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.
ರಾಯಚೂರಲ್ಲಿ ಮತ್ತೆ ನಾಲ್ವರಲ್ಲಿ ಕೊರೊನಾ ದೃಢ: 11ಕ್ಕೇರಿದ ಸೋಂಕಿತರ ಸಂಖ್ಯೆ - ರಾಯಚೂರಲ್ಲಿ ಕೊರೊನಾ ದೃಢ
ಗ್ರೀನ್ ಝೋನ್ನಲ್ಲಿ ನೆಮ್ಮದಿಯಿಂದ ಇದ್ದ ರಾಯಚೂರಲ್ಲಿ ಇದೀಗ ಕೊರೊನಾ ಪ್ರಕರಣಗಳು ದಾಖಲಾಗುತ್ತಿವೆ. ಇಂದು ಜಿಲ್ಲೆಯಲ್ಲಿ ನಾಲ್ಕು ಕೊರೊನಾ ಪ್ರಕರಣ ದಾಖಲಾಗಿದ್ದು, ಸೋಂಕಿತರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಸೋಂಕಿತರು ಎಲ್ಲರೂ ಮುಂಬೈನಿಂದ ಆಗಮಿಸಿದವರಾಗಿದ್ದು, ಕ್ವಾರಂಟೈನ್ನಲ್ಲಿದ್ದಾರೆ. ಹೀಗಾಗಿ ಜನತೆ ಕೊಂಚ ನಿರಾಳರಾಗಿದ್ದಾರೆ.
ನಾಲ್ವರು ಸಹ ಮಹಾರಾಷ್ಟ್ರದ ಮುಂಬೈಯಿಂದ ವಾಪಸ್ ಆಗಿದ್ದು, ರಾಯಚೂರಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ರೋಗಿ ಸಂಖ್ಯೆ 1461, 12 ವರ್ಷದ ಬಾಲಕಿಯಾಗಿದ್ದು, ಉಳಿದಂತೆ 26 ವರ್ಷದ ಪಿ-1459, 49 ವರ್ಷದ ಪಿ-1460 ಹಾಗೂ 30 ವರ್ಷದ ಪಿ-1462 ಮೂವರು ಮಹಿಳೆಯರಲ್ಲಿ ಸೋಂಕು ದೃಢವಾಗಿದೆ.
ರಾಯಚೂರಿಗೆ ಬಂದ ಬಳಿಕ ಕ್ವಾರಂಟೈನ್‌ನಲ್ಲಿ ಇರಿಸಿ, ಗಂಟಲು ದ್ರವವನ್ನ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ರವಾನಿಸಲಾಗಿತ್ತು. ಇಂದು ಬಂದಿರುವ ಪ್ರಯೋಗಾಲಯದ ವರದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದ್ದು, ಓಪೇಕ್‌ನ ಐಸೋಲೋಷನ್ ವಾರ್ಡ್‌ನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 11ಕ್ಕೆ ಏರಿಕೆಯಾದಂತಾಗಿದೆ.