ರಾಯಚೂರು:ಜಿಲ್ಲೆಗೆ ಕೊರೊನಾ ಸೋಂಕು ಹೆಮ್ಮಾರಿಯಂತೆ ಕಾಡುತ್ತಿದೆ. ಇಂದು ರಾಯಚೂರು ಜಿಲ್ಲೆಯ 35 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 268ಕ್ಕೆ ಏರಿಕೆಯಾಗಿದೆ. ಸೋಂಕಿತರಲ್ಲಿ 22 ಜನ ಪುರುಷರು, 13 ಜನ ಮಹಿಳೆಯರಿದ್ದು, ಐದು ಜನರಿಗೆ ಸೋಂಕಿತರ ಸಂಪರ್ಕದಿಂದ ಸೋಂಕು ತಗುಲಿದ್ದರೆ, ಉಳಿದ 30 ಜನರು ಮಹಾರಾಷ್ಟ್ರದಿಂದ ವಲಸೆ ಬಂದಿದವರಾಗಿದ್ದಾರೆ.
ಮಸ್ಕಿ ಪಟ್ಟಣದ ಬ್ಯಾಂಕ್ ಸಿಬ್ಬಂದಿ (ಪಿ-2254)ಯಿಂದ ಮೂವರಿಗೆ ಸೋಂಕು ಹರಡಿದ್ದು, ಇವರಲ್ಲಿ ಇಬ್ಬರು ಬ್ಯಾಂಕ್ ಸಿಬ್ಬಂದಿಯಾಗಿದ್ದು, ಮತ್ತೊಬ್ಬ 70 ವರ್ಷದ ಗ್ರಾಹಕನಾಗಿದ್ದಾನೆ. ಆತನಿಂದ ಜಿಲ್ಲೆಯ ಒಟ್ಟು ನಾಲ್ವರಿಗೆ ಸೋಂಕು ತಗುಲಿದಂತಾಗಿದೆ.
ಮುಂಬೈನಿಂದ ಆಗಮಿಸಿದ್ದ ಮಹಿಳೆ ಪಿ-1460 ಸಂಪರ್ಕದಿಂದ 14 ವರ್ಷದ ಬಾಲಕನಿಗೂ ಸೋಂಕು ತಗುಲಿದ್ದು, ಪಿ-1816 ಸಂಪರ್ಕದಿಂದ 45 ವರ್ಷದ ಪುರುಷನಿಗೂ ಸೋಂಕು ತಗುಲಿದೆ.